ಕಮಲ್ ಹಾಸನ್ ನಾಲಿಗೆಯನ್ನು ಕತ್ತರಿಸಬೇಕು: ತಮಿಳುನಾಡು ಸಚಿವ ರಾಜೇಂದ್ರ ಬಾಲಾಜಿ

0
148

ನ್ಯೂಸ್ ಕನ್ನಡ ವರದಿ (14-5-2019): ಕಮಲ್ ಹಾಸನ್ ಅವರು ನಾಥುರಾಮ್ ಗೋಡ್ಸೆಯನ್ನು ಟೀಕಿಸುತ್ತಾ “ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದು, ಆತನ ಹೆಸರು ನಾಥುರಾಮ್ ಗೋಡ್ಸೆ” ಎಂದಿದ್ದರು. ಈಗ ಕಮಲ್ ಹಾಸನ್ ಅವರ ನಾಲಿಗೆಯನ್ನು ಕತ್ತರಿಸಬೇಕು ಎಂದು ತಮಿಳುನಾಡು ಸಚಿವ ರಾಜೇಂದ್ರ ಬಾಲಾಜಿ ಕಿಡಿಕಾರಿದ್ದಾರೆ.

“ಕಮಲ್ ಹಾಸನ್ ಅವರು ಏನು ಮಾತನಾಡುತ್ತಾರೆ ಎಂಬುದೇ ಅವರಿಗೆ ಗೊತ್ತಿಲ್ಲ. ಅವರು ಏನು ಮಾತನಾಡಿದರೂ ಅದು ವಿವಾದವಾಗುವಂತೆಯೇ ಮಾತನಾಡುತ್ತಾರೆ. ಹಿಂದುಗಳು ಕಡಿಮೆ ಇರುವ ಪ್ರದೇಶಕ್ಕೆ ತೆರಳಿ ಮೊದಲ ಉಗ್ರ ಹಿಂದು ಎಂಬ ಹೇಳಿಕೆ ನೀಡಿದ್ದಾರೆ, ಆದರೆ ಅವರಿಗೆ ಗೊತ್ತಿರಲಿ, ಭಯೋತ್ಪಾದನೆಗೆ ಧರ್ಮವಿಲ್ಲ” ಎಂದು ಎಐಎಡಿಎಂಕೆ ಮುಖಂಡ ಬಾಲಾಜಿ ಆಕ್ರೋಶ ವ್ಯಕ್ತಪಡಿಸಿದರು. ಕಮಲ್ ಹಾಸನ್ ಕಮಲ್ ಹಾಸನ್ ಅವರ ಹೇಳಿಕೆಯನ್ನು ವಿರೋಧಿಸಿ ಈಗಾಗಲೇ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ತಮ್ಮ ಮತದ ಲಾಭಕ್ಕಾಗಿ ಒದು ಧರ್ಮವನ್ನು ಅವಹೇಳನ ಮಾಡಿದ್ದಾರೆ ಎಂದು ದೂರಿದೆ.

LEAVE A REPLY

Please enter your comment!
Please enter your name here