ಟಿಪ್ಪು ಜಯಂತಿ ಈ ಬಾರಿಯೂ ಮಾಡಿಯೇ ಮಾಡುತ್ತೇವೆ: ಸಚಿವ ಜಮೀರ್‌ ಅಹ್ಮದ್

0
207

ಮೈಸೂರು: ಯಾರು ಏನು ಹೇಳಿಕೆ ನೀಡಿದರೂ, ಪ್ರತಿ ಬಾರಿಯಂತೆ ಈ ಬಾಧಿರಿಯೂ ಟಿಪ್ಪು ಜಯಂತಿ ಮಾಡೇ ಮಾಡುತ್ತೇವೆ” ಎಂದು ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮುಂಬರುವ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಟಿಪ್ಪು ಜಯಂತಿ ವಿರೋಧಿಸುವ ಮೂಲಕ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತೆ ಮಾಡುವುದು ಸಂಸದ ಪ್ರತಾಪ್‌ ಸಿಂಹ ಅವರ ಉದ್ದೇಶವಾಗಿದೆ ಎಂದು ಹೇಳಿದರು.

ಹೀಗೆ ಮಾತನಾಡಿದರೆ ಮುಸ್ಲಿಂ ಸಮುದಾಯದ ಹೊರತಾಗಿ ಉಳಿದೆಲ್ಲರೂ ಒಂದಾಗಿ ತಮ್ಮ ಪಕ್ಷಕ್ಕೆ ಮತ ಹಾಕುತ್ತಾರೆ ಎನ್ನುವ ಭ್ರಮೆಯಲ್ಲಿದ್ದಾರೆ. ರಾಜಕೀಯಕ್ಕೆ ಬಂದ ಮೇಲೆ ಜಾತಿ, ಧರ್ಮ ವಿಚಾರ ಮಾತನಾಡಬಾರದು. ಹಾಗೆ ಮಾತನಾಡುವುದಾದರೆ ರಾಜಕೀಯ ಬಿಟ್ಟು ಹೋಗಲಿ. ಕಳೆದ ಮೂರು ವರ್ಷಗಳಿಂದ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದ್ದು, ಮುಂದೆಯೂ ಆಚರಣೆ ಮಾಡಲಿದ್ದೇವೆ ಎಂದರು.

LEAVE A REPLY

Please enter your comment!
Please enter your name here