ಎಸ್ಸೆಸ್ಸೆಫ್ ತರ್ತೀಲ್ 2020: ರಾಜ್ಯಮಟ್ಟಕ್ಕೆ ಆಯ್ಕೆ

0
14

ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಆಯೋಜಿಸಿರುವ ತರ್ತೀಲ್-2020 ಸೀನಿಯರ್ ದಅವಾ ವಿಭಾಗದಲ್ಲಿ ಕಿರಾಅತ್ ಸ್ಪರ್ಧೆ ಹಾಗೂ ಕುರ್‍ಆನ್ ಹಿಫ್ಳ್ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯಿಂದ ಅಲ್-ಇಹ್ಸಾನ್ ದಅವಾ ವಿದ್ಯಾರ್ಥಿ ಹಾಫಿಳ್ ಮುಹಮ್ಮದ್ ಅಜ್‍ಮಲ್ ಜಾರಿಗೆಬೈಲ್ ರವರು ಆಯ್ಕೆಯಾಗಿದ್ದಾರೆ. ಇನ್ನು ಸೀನಿಯರ್ ದಅವಾ ವಿಭಾಗದಲ್ಲಿ ಕುರ್‍ಆನ್ ಹಿಫ್ಳ್ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಅಲ್-ಮುಜಮ್ಮಅï ದಅವಾ ವಿದ್ಯಾರ್ಥಿ ಹಾಫಿಳ್ ಮುಹಮ್ಮದ್ ಸಿನಾನ್ ಕಬಕ ಆಯ್ಕೆಯಾಗಿದ್ದಾರೆ.

ಜೂನಿಯರ್ ದಅವಾ ವಿಭಾಗದಲ್ಲಿ ಕಿರಾಅತ್ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಮನ್ಶರ್ ಸಿದ್ರಾ ಅಕಾಡೆಮಿ ವಿದ್ಯಾರ್ಥಿ ಮುಹಮ್ಮದ್ ಅಫ್‍ಳಲ್ ಜಾರಿಗೆಬೈಲುರವರು ಆಯ್ಕೆಯಾಗಿದ್ದಾರೆಂದು ಪ್ರಕಟನೆ ತಿಳಿಸಿದೆ. ಈ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳು, ಗೋಳ್ತಮಜಲು ಮದ್ರಸದಲ್ಲಿ ಸುದೀರ್ಘ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಮರ್ಹೂಂ ಜಿ.ಎಂ. ಇಸ್ಮಾಯೀಲ್ ಮುಸ್ಲಿಯಾರ್ ರವರ ಮೊಮ್ಮಕ್ಕಳು ಎಂಬುವುದು ವಿಶೇಷ.

LEAVE A REPLY

Please enter your comment!
Please enter your name here