ಹೆಬ್ಬಾಳ ಶಾಸಕ ಭೈರತಿ ಸುರೇಶ್ ಕೊಲೆಗೆ ಯತ್ನ..!

0
738

ನ್ಯೂಸ್ ಕನ್ನಡ ವರದಿ: ಹೆಬ್ಬಾಳ ಶಾಸಕ ಭೈರತಿ ಸುರೇಶ್ ಅವರಿಗೆ ಶಿವು ಎಂಬಾತ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ. ಇದಕ್ಕೆ ಅಪಘಾತವೇ ಕಾರಣವೆಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಜನರ ಗುಂಪಿನೊಂದಿಗೆ ಭೈರತಿ ಸುರೇಶ್ ಮಾತನಾಡುವಾಗ ಶಿವು ಎಂಬಾತ ಏಕಾಏಕಿ ಚಾಕು ಹಿಡಿದು ಮುಂದೆ ಬಂದ ಎನ್ನಲಾಗಿದೆ. ಆದರೆ, ಈತನ ಈ ಕೃತ್ಯಕ್ಕೆ ಏನು ಕಾರಣ ಎಂಬುದು ಗೊತ್ತಾಗಿಲ್ಲ. ಕೊತ್ತನೂರು ಪೊಲೀಸರು ಆರೋಪಿ ಶಿವುನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.

ಸಮಯಕ್ಕೆ ಸರಿಯಾಗಿ ಗನ್ ಮ್ಯಾನ್ ಗಳು ಬಂದು ಆರೋಪಿಯನ್ನು ಹಿಡಿದಿದ್ದಾರೆ, ಸ್ಥಳಕ್ಕೆ ಕೊತ್ತನೂರು ದಿಣ್ಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಹತ್ಯೆಗೆ ಯತ್ನಿಸಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಈ ಸಂಬಂಧ ಸ್ಪಷ್ಟನೆ ನೀಡಿರುವ ಸುರೇಶ್ ಆ ವ್ಯಕ್ತಿ ನನ್ನ ಮೇಲೆ ಏಕೆ ಹಲ್ಲೆ ಮಾಡಿದರು ಎಂಬುದು ನನಗೆ ಗೊತ್ತಿಲ್ಲ, ನನಗೆ ಯಾರೋಂದಿಗೂ ವಯಕ್ತಿಕ ದ್ವೇಷ ವಿಲ್ಲ, ಪೊಲೀಸರು ಈ ಸಂಬಂಧ ಸೂಕ್ತ ತನಿಖೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here