ತ್ಯಾಗ ಬಲಿದಾನದ ಪ್ರತೀಕ ತ್ಯಾಗ ಮಾಡಿದ ಆನಿವಾಸಿ ಭಾರತೀಯರು: ಬಹ್ರೈನ್ ಮಣ್ಣಿನಲ್ಲಿ 120 ಯುನಿಟ್ ರಕ್ತ ಸಂಗ್ರಹದೊಂದಿಗೆ ದಾಖಲೆ

0
5

ನ್ಯೂಸ್ ಕನ್ನಡ ವರದಿ ಬಹ್ರೈನ್ : ಇಂಡಿಯನ್ ಸೋಶಿಯಲ್ ಫೋರಂ ಬಹ್ರೈನ್, ಝಮಾನ್ ಬಾಯ್ಸ್ ಕಲ್ಲಡ್ಕ – ರಿ, ಬ್ಲಡ್ ಡೋನರ್ಸ್ ಮಂಗಳೂರು – ರಿ ಇದರ ಸಂಯುಕ್ತ ಆಶ್ರಯದಲ್ಲಿ ಸಲ್ಮಾನಿಯಾ ರಕ್ತನಿಧಿ ಕೇಂದ್ರ ಮನಮಾ / ಬಹ್ರೈನ್ ಇವರ ಸಹಯೋಗದೊಂದಿಗೆ ಜುಲೈ 31 ಶುಕ್ರವಾರ ಈದ್ ಹಬ್ಬದ ದಿನದಂದು ಬೆಳಿಗ್ಗೆ 7 :30 ರಿಂದ ಮಧ್ಯಾಹ್ನ 2:00 ಗಂಟೆಯವರೆಗೆ “ಸಲ್ಮಾನಿಯಾ ರಕ್ತ ನಿಧಿ ಕೇಂದ್ರದಲ್ಲಿ” “ಬೃಹತ್ ರಕ್ತದಾನ ಶಿಬಿರ ” ಜರುಗಿತು.

ಕೋವಿಡ್ 19, ಕೊರೋನಾದ ಈ ಒಂದು ಸಂದಿಗ್ಧ ಸಮಯದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲವು ದೇಶ-ವಿದೇಶದ ರೋಗಿಗಳಿಗೆ ರಕ್ತದ ಅವಶ್ಯಕತೆಯಿದ್ದು, ಈ ಒಂದು ಶಿಬಿರದ ಆ ಯೋಜನೆಯ ಮೂಲಕ ರಕ್ತ ಪೋರೈಕೆಯ ಮೂಲ ಉದ್ದೇಶವಾಗಿತ್ತು.

ಕಾರ್ಯಕ್ರಮ ಆಯೋಜಕರ ಕರೆಗೆ ಓಗೊಟ್ಟು ಬಹ್ರೈನ್ ಆನಿವಾಸಿ ನಿವಾಸಿಗಳು ಉತ್ತಮ ಸ್ಪಂದನೆ ನೀಡಿ ಸುಮಾರು 120 ಜನರು ರಕ್ತದಾನ ಮಾಡಿದರು.
ಈ ಮೂಲಕ ಭಾರತೀಯ ಮೂಲದ ಸಂಘಟನೆ ಹೊಸ ದಾಖಲೆ ಸೃಷ್ಟಿಸಿತು.

ಇಂಡಿಯನ್ ಸೋಶಿಯಲ್ ಫೋರಂ ಬಹ್ರೈನ್, ಝಮಾನ್ ಬಾಯ್ಸ್ ಕಲ್ಲಡ್ಕ – ರಿ, ಬ್ಲಡ್ ಡೋನರ್ಸ್ ಮಂಗಳೂರು – ರಿ ಇದರ ಕಾರ್ಯ ನಿರ್ವಾಹಕರು ಮತ್ತು ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here