ಯುವಕರು ಹೋರಾಟ ಮಾಡುವಾಗ ಅಹಿಂಸೆಯ ಮಾರ್ಗ ಅನುಸರಿಸಬೇಕು: ರಾಷ್ಟ್ರಪತಿ ಕರೆ

0
69

ನ್ಯೂಸ್ ಕನ್ನಡ ವರದಿ: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕರೆ ನೀಡಿರುವ ರಾಷ್ಟ್ರಪತಿ ರಾಮನಾಥ್ ಗೋವಿಂದ್ ದೇಶದ ಜನತೆ, ಮುಖ್ಯವಾಗಿ ಯುವಕರು ನಿರ್ದಿಷ್ಟ ಕಾರಣಕ್ಕಾಗಿ ಹೋರಾಟ ಮಾಡುವಾಗ ಅಹಿಂಸೆಯ ಮಾರ್ಗವನ್ನು ಅನುಸರಿಸಬೇಕೆಂದು ಹೇಳಿದ್ದಾರೆ.

ಗಣರಾಜ್ಯೋತ್ಸವದ ಅಂಗವಾಗಿ ಜ.25 ರಂದು ದೇಶವನ್ನುದ್ದೇಶಿಸಿ ಮಾತನಾಡಿರುವ ರಾಷ್ಟ್ರಪತಿಗಳು, ಸಾಮಾಜಿಕ ಹಾಗೂ ಆರ್ಥಿಕ ಉದ್ದೇಶಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಸಾಂವಿಧಾನಿಕ ವಿಧಾನಗಳಲ್ಲಿ ನಂಬಿಕೆ ಇಡಬೇಕೆಂದು ಹೇಳಿದ್ದಾರೆ.

ಸರ್ಕಾರ ಹಾಗೂ ವಿಪಕ್ಷಗಳು ಬಹುಮುಖ್ಯ ಪಾತ್ರಗಳನ್ನು ಹೊಂದಿವೆ. ವಿಪಕ್ಷ ಹಾಗೂ ಆಡಳಿತ ಪಕ್ಷಗಳೆರಡೂ ದೇಶದ ಅಭಿವೃದ್ಧಿ, ಜನರ ಕಲ್ಯಾಣಗಳನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯಬೇಕೆಂದು ರಾಷ್ಟ್ರಪತಿಗಳು ಸಂದೇಶ ನೀಡಿದ್ದಾರೆ.

ಸಿಎಎ ವೇಳೆ ಪ್ರತಿಭಟನೆ ಹಿಂಸಾತ್ಮಕ ರೂಪ ತಾಳುವ ಬಗ್ಗೆ ಮಾತನಾಡಿದ ಅವರು ಗಾಂಧಿಜಿ ಅವರ ಸತ್ಯ ಹಾಗೂ ಅಹಿಂಸೆಯ ಸಂದೇಶದ ಕುರಿತು ನಾವು ಆತ್ಮಾವಲೋಕನ ನಡೆಸುವುದು ಉತ್ತಮ. ದೇಶದ ಜನತೆ, ಮುಖ್ಯವಾಗಿ ಯುವಕರು ನಿರ್ದಿಷ್ಟ ಕಾರಣಕ್ಕಾಗಿ ಹೋರಾಟ ಮಾಡುವಾಗ ಅಹಿಂಸೆಯ ಮಾರ್ಗವನ್ನು ಅನುಸರಿಸಬೇಕೆಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here