ಮೋದಿ ವಿರುದ್ಧ ಸ್ಪರ್ಧಿಸಿದ್ದ ಸೈನಿಕ ತೇಜ್ ಬಹದ್ದೂರ್ ನಾಮಪತ್ರ ತಿರಸ್ಕರಿಸಿದ ಚುನಾವಣಾಧಿಕಾರಿ!

0
1184

ನ್ಯೂಸ್ ಕನ್ನಡ ವರದಿ(01.5.19): ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಿಂದ ಲೋಕಸಭಾ ಕ್ಷೇತ್ರಕ್ಕೆ ಸಪರ್ಧೆ ಮಾಡುತ್ತಿದ್ದು, ಇದೇ ಕ್ಷೇತ್ರದಿಂದ ಭಾರತೀಯ ಸೇನೆಯ ಅವ್ಯವಸ್ಥೆಯ ಕುರಿತು ತೋರಿಸಿದ್ದ ಸೈನಿಕ ತೇಜ್ ಬಹಾದ್ದೂರ್ ಕೂಡಾ ಸ್ಪರ್ಧೆಯ ಕಣದಲ್ಲಿದ್ದರು. ಇದೀಗ ಮಾಜಿ ಸೈನಿಕ ತೇಜ್ ಬಹಾದ್ದೂರ್ ರ ನಾಮಪತ್ರವನ್ನು ಚುನಾವಣಾಧಿಕಾರಿ ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ತೇಜ್ ಬಹಾದ್ದೂರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ತಯಾರಿ ನಡೆಸಿದ್ದರು. ಬಳಿಕ ಎಸ್ಪಿ ಪಕ್ಷದಿಂದ ಮೈತ್ರಿ ಬೆಂಬಲದೊಂದಿಗೆ ತೇಜ್ ಬಹಾದ್ದೂರ್ ರನ್ನು ಕಣಕ್ಕಿಳಿಸಲಾಗಿತ್ತು. ರಾಜ್ಯಕ್ಕೆ ಅಪಮಾನ ಮಾಡಿದ್ದಾರೆ ಹಾಗೂ ಭ್ರಷ್ಟಾಚಾರ ಎಸಗಿರುವ ತೇಜ್ ಬಹಾದ್ದೂರ್ ರನ್ನು ಕಣಕ್ಕಿಳಿಸಬಾರದು ಎಂದು ಕೆಲವರು ಮನವಿ ಮಾಡಿದ್ದರು. ಆದರೆ ಈ ಕುರಿತು ತೇಜ್ ಬಹಾದ್ದೂರ್ ಎಲ್ಲಾ ದಾಖಲೆಗಳನ್ನು ನೀಡಿದ್ದರೂ ಅವರನ್ನು ತಿರಸ್ಕರಿಸಲಾಗಿದೆ ಎಂದು ಮಾಧ್ಯಮಗಳಿಗೆ ತೇಜ್ ಹೇಳಿಕೆ ನೀಡಿದ್ದಾರೆ.

ಈ ಹಿಂದೆ ಕೇಜ್ರಿವಾಲ್ ಮೋದಿ ವಿರುದ್ಧ ಸ್ಪರ್ಧೆ ಮಾಡಿದ್ದಾಗ 2 ಲಕ್ಷಕ್ಕೂ ಅಧಿಕ ವೋಟ್ ಗಳಿಸಿದ್ದರು. ಇದೇ ಭಯದಿಂದಾಗಿ ತೇಜ್ ಬಹಾದ್ದೂರ್ ನಾಮಪತ್ರ ತಿರಸ್ಕರಿಸಲು ಮುಂದಾಗುತ್ತಿದ್ದಾರೆ ಎಂಬುವುದು ಸಾರ್ವಜನಿಕರ ಅ¨ಭಿಪ್ರಾಯ.

LEAVE A REPLY

Please enter your comment!
Please enter your name here