ತ್ರಿವಳಿ ತಲಾಖ್ ನಿಷೇಧಕ್ಕೆ ನೂತನ ಮಸೂದೆ: ಇಂದು ನಿರ್ಧಾರ!

0
426

ನ್ಯೂಸ್ ಕನ್ನಡ ವರದಿ : ಕಳೆದ ಆಗಸ್ಟ್ ನಲ್ಲಿ ಸರ್ವೋಚ್ಚ ನ್ಯಾಯಾಲಯ 3:2ರ ಅನುಪಾತದಲ್ಲಿ ಐತಿಹಾಸಿಕ ತೀರ್ಪನ್ನು ನೀಡಿತ್ತಾದರೂ, ಮುಸ್ಲಿಂ ಮಹಿಳೆಯರನ್ನು ಈ ಅನಾಗರಿಕ ತ್ರಿವಳಿ ವಿಚ್ಛೇದನದಿಂದ ರಕ್ಷಿಸಲು ಸೂಕ್ತ ಕಾನೂನು ತರಬೇಕು ಎಂದೂ ಆದೇಶಿಸಿತ್ತು. ಈ ಕಾರಣಕ್ಕಾಗಿ ಮುಸ್ಲಿಂ ಮಹಿಳೆ (ವಿಚ್ಛೇದನದಿಂದ ರಕ್ಷಣೆಯ ಹಕ್ಕು) ಕಾಯ್ದೆ 2017 ಅನ್ನು ಮಂಡಿಸಿತ್ತು. ತ್ರಿವಳಿ ತಲಾಖ್ ನಿಷೇಧಕ್ಕೆ ಸಂಬಂಧಿಸಿದಂತೆ ಹೊಸ ಮಸೂದೆಯನ್ನು ಜಾರಿಗೆ ತರುವ ಬಗ್ಗೆ ಕೇಂದ್ರ ಸಚಿವ ಸಂಪುಟ ಇಂದು ನಿರ್ಧಾರ ತೆಗೆದುಕೊಳ್ಳಲಿದೆ.

17 ನೇ ಲೋಕಸಭೆಯ ಮೊದಲ ಮುಂಗಾರು ಅಧಿವೇಶನ ಜೂನ್ 17 ರಿಂದ ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ತ್ರಿವಳಿ ತಲಾಖ್ ನಿಷೇಧದ ಕುರಿತು ಹೊಸ ಮಸೂದೆಯನ್ನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಯಲಿದೆ. ಹದಿನಾರನೇ ಲೋಕಸಭೆಯಲ್ಲೂ ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತಾದರೂ ಲೋಕಸಭೆಯ ಅವಧಿ ಮುಕ್ತಾಯವಾಗಿದ್ದರಿಂದ ಮತ್ತು ರಾಜ್ಯ ಸಭೆಯಲ್ಲೂ ಈ ಮಸೂದೆಗೆ ಅಂಗೀಕಾರ ಸಿಗದ ಕಾರಣ ಅದು ಮಂಡನೆಯಾಗಿರಲಿಲ್ಲ. ಮೌಖಿಕವಾಗಿಯಾಗಲಿ, ಲಿಖಿತ ರೂಪದಲ್ಲಾಗಲಿ, ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಅಥವಾ ಮತ್ತಾವುದೇ ಮಾಧ್ಯಮದ ಮೂಲಕ ಮುಸ್ಲಿಂ ಗಂಡ ತನ್ನ ಹೆಂಡತಿಗೆ ತ್ರಿವಳಿ ತಲಾಖ್ ನೀಡುವುದು ಅಸಿಂಧು ಮತ್ತು ಕಾನೂನಿಗೆ ವಿರುದ್ಧವಾದದ್ದು.

LEAVE A REPLY

Please enter your comment!
Please enter your name here