Shocking! ಲಾಡ್ಜ್’ಗೆ ಪೊಲೀಸರು ದಾಳಿ ನಡೆಸಿದಾಗ ಇಬ್ಬರು ವೇಶ್ಯೆಯರು ಮಾಡಿದ್ದೇನು ಗೊತ್ತೇ?

0
5777

ವೇಶ್ಯಾವಾಟಿಕೆ ನಡೆಸುವ ಯಾವುದೇ ಮಹಿಳೆಯರು ಖುಷಿಯಿಂದ, ತಮ್ಮಿಚ್ಚೆಯಿಂದ ಈ ಕೆಲಸ ಮಾಡಲ್ಲ, ಅವರಿಗೆ ಅವರದೇ ಆದಂತಹ ಒತ್ತಡ, ಕುಟುಂಬ ಮತ್ತು ಮಕ್ಕಳನ್ನು ಸಾಕಬೇಕಾದ ಜವಾಬ್ದಾರಿ ಹೀಗೆ ಹಲವು ಕಣ್ಣೀರ ಕಥೆಗಳೇ ಇರುತ್ತದೆ. ಹೀಗೆ ಬೇರೆ ದಾರಿ ಕಾಣದೆ ಕೆಲವರ ಆಮಿಷದ ಬಲೆಗೆ ಬಿದ್ದು ದುಡ್ಡು ಸಂಪಾದಿಸಿ ಕಷ್ಟ ದೂರ ಮಾಡಬೇಕೆಂದು ವೇಶ್ಯಾವಾಟಿಕೆಗೆ ಒಪ್ಪಿಕೊಳ್ಳುತ್ತಾರೆ, ಕ್ರಮೇಣ ಅದುವೇ ಅವರ ದಿನಚರಿ, ಅವರ ವೃತ್ತಿಯಾಗುತ್ತೆ. ಹೀಗೆ ವೇಶ್ಯಾವಾಟಿಕೆ ನಡೆಯುತ್ತಿದ್ದ ಕಟ್ಟಡದ ಮೇಲೆ ಪೊಲೀಸರು ದಾಳಿ ನಡೆಸಿ ಮಹಿಳೆಯರನ್ನೇ ಪೀಡಿಸಿ ಅವರಿಂದ ಮಾಮೂಲಿ ಪಡೆದು ಪುನಃ ಅವರನ್ನು ಲೈಂಗಿಕವಾಗಿಯೂ ಬಳಸಿಕೊಳ್ಳುವ ಹಲವಾರು ಘಟನೆಗಳು ನಮ್ಮ ಮುಂದೆ ಕಾಣ ಸಿಗುತ್ತವೆ.

ನಿನ್ನೆ ರಾತ್ರಿ ದಕ್ಷಿಣ ಮುಂಬೈನ ಗ್ರಾಂಟ್ ರಸ್ತೆಯ ಡಿ.ಎಂ.ಮಾರ್ಗ್ ಬಡಾವಣೆಯಲ್ಲಿನ ಓಂ ಬಿಲ್ಡಿಂಗ್‍ನಲ್ಲಿ ರಾತ್ರಿ 10.30ರಲ್ಲಿ ಒಂದು ಆಘಾತಕಾರಿ ಘಟನೆ ಸಂಭವಿಸಿದೆ. ವೇಶ್ಯಾವಾಟಿಕೆಗೆ ಕುಪ್ರಸಿದ್ಧವಾಗಿರುವ ಈ ಪ್ರದೇಶದಲ್ಲಿ ಡಿ.ಎಂ.ಮಾರ್ಗ್ ಠಾಣೆಯ ಪೊಲೀಸರು ಗಸ್ತಿನಲ್ಲಿದ್ದರು. ಈ ಸಂದರ್ಭದಲ್ಲಿ ಓಂ ಬಿಲ್ಡಿಂಗ್‍ನಲ್ಲಿ ದಾಳಿ ಮಾಡಿದಾಗ ಕೆಳ ಅಂತಸ್ತಿನಲ್ಲಿದ್ದವರು ಮೂರನೇ ಮಹಡಿಯಲ್ಲಿ ದಂಧೆಯಲ್ಲಿ ತೊಡಗಿದ್ದವರನ್ನು ಎಚ್ಚರಿಸಿದರು.

ಸಾಮಾನ್ಯವಾಗಿ ವೇಶ್ಯಾವಾಟಿಕೆಯಲ್ಲಿ ಹೆಚ್ಚು ಸಮಯದಿಂದ ಕೆಲಸ ಮಾಡುವ ಲೈಂಗಿಕ ಕಾರ್ಯಕರ್ತೆಯರಿಗೆ ಪೊಲೀಸರ ಭಯವಿರುವುದಿಲ್ಲ, ಅವರಿಗೆ ಪೊಲೀಸ್ ಠಾಣೆಗೆ ಹೋಗಿ ಬರುವುದು ಅಭ್ಯಾಸವಾಗಿರುತ್ತದೆ, ಆದರೆ ಹೊಸದಾಗಿ ಬಂದವರಿಗೆ ತಮ್ಮ ಕುಟುಂಬದ ಮರ್ಯಾದೆಯ ಬಗ್ಗೆ ನೆನಪಾಗಿ ಭಯವಾಗುತ್ತೆ, ಅದೇ ಕಾರಣಕ್ಕೆ ಪೊಲೀಸ್ ದಾಳಿಯಾಗಿದೆ ಎಂದು ಭಯಭೀತರಾದ ಇಬ್ಬರು ಮಹಿಳೆಯರು ಕಿಟಕಿಗೆ ಹಗ್ಗ ಕಟ್ಟಿ ಕೆಳಗೆ ಇಳಿಯುತ್ತಿದ್ದಾಗ ಆಯತಪ್ಪಿ ಬಿದ್ದರು. ತೀವ್ರ ಗಾಯಗೊಂಡ ಅವರಿಬ್ಬರು ಜೈಕುಲಾದಲ್ಲಿನ ಜೆಜೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇವರ ಪಶ್ವಿಮ ಬಂಗಾಳದ ಮೂಲದವರು. ಇವರಲ್ಲಿ ಒಬ್ಬಾಕೆ 50 ವರ್ಷದ ಮಹಿಳೆ. ಡಿ.ಬಿ.ಮಾರ್ಗ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

LEAVE A REPLY

Please enter your comment!
Please enter your name here