ಹಿಂದೂ ಧರ್ಮಕ್ಕೆ ಅತೀ ಹೆಚ್ಚು ಹಾನಿಯುಂಟು ಮಾಡಿದವರು ಬಿಜೆಪಿ ಮತ್ತು ಆರೆಸ್ಸೆಸ್: ಸ್ವಾಮಿ ಶಂಕರಾಚಾರ್ಯ

0
593

ನ್ಯೂಸ್ ಕನ್ನಡ ವರದಿ(10.5.19): ಆರೆಸ್ಸೆಸ್ ಮತ್ತು ಬಿಜೆಪಿಯು ಹಿಂದೂ ಧರ್ಮವನ್ನು ಗುತ್ತಿಗೆ ಪಡೆದಂತೆ ವರ್ತಿಸುತ್ತಿದೆ ಎನ್ನುವ ಅಪವಾದವು ಹಲವು ವರ್ಷಗಳಿಂದಲೂ ಕೇಳಿ ಬರುತ್ತಿದೆ. ವೈದಿಕ ಆಚಾರ ವಿಚಾರಗಳು ಹಾಗೂ ಹಲವಾರು ತತ್ವಗಳನ್ನು ಪ್ರತಿಪಾದಿಸಿದ ಹಿಂದೂ ಧರ್ಮ ಹಲವಾರು ಶತಮಾನಗಳಿಂದ ಪ್ರಪಂಚದಲ್ಲಿ ಉಳಿದುಕೊಂಡು ಬಂದರೂ ಹಿಂದೂ ಧರ್ಮವನ್ನು ರಕ್ಷಿಸಲು ನಾವೇ ಆಗಬೇಕೆಂದು ಬಿಜೆಪಿಗರು ಮತ್ತು ಆರೆಸ್ಸೆಸ್ಸಿಗರು ಮುಂದಾಗುತ್ತಿರುವುದನ್ನು ಹಲವರು ಖಂಡಿಸುತ್ತಲೇ ಬಂದಿದ್ದಾರೆ. ಇದೀಗ ಈ ಕುರಿತಾದಂತೆ ಮಾತನಾಡಿದ ದ್ವಾರಕಾ ಪೀಠದ ಸ್ವಾಮಿ ಶಂಕರಾಚಾರ್ಯ ಸರಸ್ವತಿ, ಹಿಂದೂ ಧರ್ಮದ ಮೂಲವನ್ನು ಆರೆಸ್ಸೆಸ್ ಮತ್ತು ಬಿಜೆಪಿ ಕೆಡಿಸುತ್ತಿದೆ. ಹಿಂದೂ ಧರ್ಮಕ್ಕೆ ಅತಿಯಾಗಿ ಕೆಡುಕು ಬಗೆದವರು ಆರೆಸ್ಸೆಸ್ ಮತ್ತು ಬಿಜೆಪಿ ಮಾತ್ರ ಎಂದು ಹೇಳಿದ್ದಾರೆ.

“ಆರೆಸ್ಸೆಸ್ ಮತ್ತು ಬಿಜೆಪಿ ದೇಶದಲ್ಲಿ ಕೋಮು ಸಾಮರಸ್ಯವನ್ನು ಹದಗೆಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಹಿಂದೂ ಧರ್ಮದ ಮೂಲ ತತ್ವಗಳಿಗೆ ಇವು ಭಂಗವುಂಟು ಮಾಡುತ್ತಿವೆ. ಅಲ್ಲದೇ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಗೆ ಹಿಂದೂ ಧರ್ಮದ ಕುರಿತಾದಂತೆ ತಿಳಿದೇ ಇಲ್ಲ. ಭಾರತದಲ್ಲಿ ಹುಟ್ಟಿದವರು ಎಲ್ಲರೂ ಹಿಂದೂಗಳು ಎಂದು ಭಾಗ್ವತ್ ಹೇಳುತ್ತಾರೆ. ಹಾಗಾದರೆ ಅಮೆರಿಕಾ ಅಥವಾ ಇಂಗ್ಲೆಂಡ್ ನಲ್ಲಿ ಹಿಂದೂಗಳಿಗೆ ಜನಿಸಿದ ಮಕ್ಕಳ ಅವಸ್ಥೆಯೇನು? ಎಂದು ಶಂಕರಾಚಾರ್ಯ ಪ್ರಶ್ನಿಸಿದ್ದಾರೆ.

ಬಳಿಕ ಮಾತನಾಡಿದ ಅವರು, ಬಿಜೆಪಿ ಮುಖಂಡರು ದೇಶದಲ್ಲೇ ಅತೀಹೆಚ್ಚು ಬೀಫ್ ರಫ್ತು ಮಾಡುವವರಾಗಿದ್ದಾರೆ. ಅಲ್ಲದೇ ದೇಶದಲ್ಲಿ ಬೀಫ್ ರಫ್ತು ಕಡಿಮೆಯಾಗಲೂ ಇಲ್ಲ. ಆದರೆ ಬಿಜೆಪಿಯವರೇ ಇನ್ನೊಂದು ಕಡೆ ಗೋಹತ್ಯೆ ನಿಷೇಧ ಮಾಡಿ ಎಂದು ದ್ವಿಮುಖ ದೋರಣೆ ತೋರುತ್ತಾರೆ. ಬಿಜೆಪಿಯರು ತಾವು ಅಧಿಕಾರಕ್ಕೆ ಬರುವ ಮುಂಚೆ ನೀಡಿದ್ದ ಭರವಸೆಗಳ ಕುರಿತು ಇಂದಿಗೂ ಮಾತನಾಡುವುದಿಲ್ಲ. ಕಾಶ್ಮೀರದ 370 ಆರ್ಟಿಕಲ್ ಅನ್ನು ಕಾರಿಗೆ ತಂದರೆ ದೇಶದ ಜನರಿಗೆ ಉದ್ಯೋಗ ದೊರಕುತ್ತದೆಯೇ? 15 ಲಕ್ಷ ಕೊಡುತ್ತೇನೆಂದದ್ದು ಎಲ್ಲಿದೆ? ರಾಮಮಂದಿರವನ್ನು ಅಯೋಧ್ಯೆಯಲ್ಲಿ ಕಟ್ಟಿದ್ದೀರಾ? ಈ ಪ್ರಶ್ನೆಗಳನ್ನು ಕೇಳಿದರೆ ಮೋದಿ ಮಾತ್ರವಲ್ಲ ಯಾವ ಬಿಜೆಪಿ ನಾಯಕನೂ ಉತ್ತರಿಸುವುದಿಲ್ಲ ಎಂದು ಹೇಳಿದ್ದಾರೆ.

ಆಸಾರಾಮ್ ಬಾಪು ಹಾಗೂ ಆತನ ಮಗನಿಗೆ ನ್ಯಾಯಾಲಯದಿಂದ ಶಿಕ್ಷೆ ನೀಡಲಾಗಿದೆ. ಆದರೆ ಧಾರ್ಮಿಕ ವಿಧಿ ಪ್ರಕಾರ ಅವರಿಗೆ ಇನ್ನೂ ಕಠಿಣ ಶಿಕ್ಷೆ ನೀಡಬೇಕಾಗಿದೆ. ಧರ್ಮವನ್ನು ತಪ್ಪಾದ ಕಾರ್ಯಗಳಿಗೆ ಬಳಸಿಕೊಳ್ಳುವುದು ತಪ್ಪು. ಸ್ವಯಂ ಘೋಷಿತ ದೇವಮಾನವರಿಗೆ ನಮ್ಮ ಧರ್ಮದಲ್ಲಿ ಸ್ಥಾನವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here