ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿಗಳು ಸುಮಲತಾರನ್ನು ಸ್ವಾಗತಿಸಿದ್ದು ಹೇಗೆ ಗೊತ್ತೇ?

0
246

ನ್ಯೂಸ್ ಕನ್ನಡ ವರದಿ (16-6-2019): ಎರಡು ವರ್ಷಗಳ ಹಿಂದೆ ನಿಖಿಲ್ ಕುಮಾರಸ್ವಾಮಿ ಅಭಿನಯದ ಜಾಗ್ವಾರ್ ಆಡಿಯೋ ಲಾಂಚ್ ವೇಳೆ ಮಂಡ್ಯದಲ್ಲಿ ಅವರ ತಂದೆ ಎಚ್.ಡಿ. ಕುಮಾರಸ್ವಾಮಿ ತಮ್ಮ ಮಗನನ್ನು ‘ನಿಖಿಲ್ ಎಲ್ಲಿದ್ದೀಯಪ್ಪ’ ಎಂದು ಕರೆದಿದ್ದು ಮೊನ್ನೆ ಚುನಾವಳೆ ವೇಳೆ ಭಾರೀ ಟ್ರೋಲ್ ಆಗಿ ವೈರಲ್ ಆಗಿತ್ತು.

ನಿನ್ನೆ ಮಂಡ್ಯ ಸಂಸದೆ ಸುಮಲತಾ ತಮ್ಮ ಪುತ್ರ ಅಭಿಷೇಕ್ ಜೊತೆ ಧಾರವಾಡದ ನುಗ್ಗಿಕೆರಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಹುಬ್ಬಳ್ಳಿಯ ಬಿವಿಬಿ ಎಂಬಿನಿಯರಿಂಗ್ ಕಾಲೇಜಿನ ಆಡಿಟೋರಿಯಂನಲ್ಲಿ ಅಭಿಷೇಕ್ ಅವರ ಅಮರ್ ಚಿತ್ರದ ಸಂವಾದಕ್ಕೆ ಬಂದಿದ್ದರು. ಸುಮಲತಾ ಅವರು ವೇದಿಕೆ ಮೇಲೇರುತ್ತಿದ್ದಂತೆ ವಿದ್ಯಾರ್ಥಿಗಳು ನಿಖಿಲ್ ಎಲ್ಲಿದ್ದೀಯಪ್ಪಾ, ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಕೂಗಿದ್ದಾರೆ. ವಿಧ್ಯಾರ್ಥಿಗಳು ‘ನಿಖಿಲ್ ಎಲ್ಲಿದಿಯಪ್ಪಾ’ ಎಂದು ಕೂಗುತ್ತಿದ್ದಂತೆ ಅಭಿಷೇಕ್ ಅವರು, ಯಾರಾದ್ರು ಎಲ್ಲಾದರೂ ಹೋಗಲಿ ನಾವು ಇಲ್ಲಿದ್ದೀವಪ್ಪ. ಅದನ್ನ ಬಿಟ್ಟು ಬಿಡಿ, ನಮ್ಮ ಅಮ್ಮನಿಗೆ ಇದೀಗ ಮಂಡ್ಯ, ಕರ್ನಾಟಕ ಮಾತ್ರವಲ್ಲ, ಇಡೀ ಇಂಡಿಯಾದಲ್ಲಿ ಅಭಿಮಾನಿಗಳಿದ್ದಾರೆ ಎಂದರು.

LEAVE A REPLY

Please enter your comment!
Please enter your name here