ನೋಟಿನಲ್ಲಿ ಲಕ್ಶ್ಮಿ ದೇವಿ ಚಿತ್ರ ಹಾಕಿದ್ರೆ ರೂಪಾಯಿ ಮೌಲ್ಯ ವೃದ್ದಿ: ಸುಬ್ರಮಣಿಯನ್ ಸ್ವಾಮಿ

0
12

ನ್ಯೂಸ್ ಕನ್ನಡ ವರದಿ: ಭಾರತೀಯ ಕರೆನ್ಸಿ ನೋಟುಗಳ ಮೇಲೆ ಲಕ್ಶ್ಮಿದೇವಿಯ ಚಿತ್ರ ಹಾಕಿದ್ದಾದರೆ ರುಪಾಯಿಯ ಮೌಲ್ಯ ವೃದ್ದಿಸಲಿದೆ ಎಂದು ಬಿಜೆಪಿ ಮುಖಂಡ ಮತ್ತು ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿಹೇಳಿದ್ದಾರೆ.

ಮಂಗಳವಾರ ರಾತ್ರಿ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ‘ಸ್ವಾಮಿ ವಿವೇಕಾನಂದ ವ್ಯಾಖ್ಯಾನ್ ಮಾಲಾ ಎಂಬ ಉಪನ್ಯಾಸ ಸರಣಿಯನ್ನುದ್ದೇಶಿಸಿ ಉಪನ್ಯಾಸ ನೀಡಿದ್ದ ನಂತರ ಈ ಮಾತನ್ನು ಹೇಳಿದ್ದಾರೆ.

ಸುದ್ದಿಗಾರರೊಡನೆ ಮಾತನಾಡುತ್ತಾ ಇಂಡೋನೇಷ್ಯಾದ ಕರೆನ್ಸಿಯಲ್ಲಿ ಮುದ್ರಿಸಲಾದ ಗಣೇಶನ ಚಿತ್ರದ ಕುರಿತ ಪ್ರಶ್ನೆಗೆ ಉತ್ತರಿಸಿದ ಸ್ವಾಮಿ, “ಪ್ರಧಾನಿ ನರೇಂದ್ರ ಮೋದಿ ಈ ಪ್ರಶ್ನೆಗೆ ಉತ್ತರಿಸಬಹುದು, ಗಣೇಶನು ಅಡ್ಡಿಗಳನ್ನು ನಿವಾರಿಸಬಲ್ಲ, ನಾನು ಹೇಳುವುದೆಂದರೆ ನೋಟುಗಳ ಮೇಲೆ ಲಕ್ಷ್ಮಿ ದೇವತೆ ಚಿತ್ರ ಹಾಕಿದ್ದಾದರೆ ರೂಪಾಯಿಯ ಸ್ಥಿತಿಯನ್ನು ಸುಧಾರಿಸಬಹುದು.

ಒಂದೊಮ್ಮೆ ಪ್ರಧಾನಿಗಳು ಈ ತೀರ್ಮಾನಕ್ಕೆ ಬಂದರೆ ನಾನು ಅವರಿಗೆ ಬೆಂಬಲವಾಗಿ ನಿಲ್ಲುತ್ತೇನೆ, ಹಾಗೆಯೇ ಈ ಬಗ್ಗೆ ಯಾರೂ ಕೆಟ್ಟದಾಗಿ ಭಾವಿಸಬಾರದು. ” ಎಂದರು.

LEAVE A REPLY

Please enter your comment!
Please enter your name here