‘ಎಲ್ಲಾ ದೇವರು ಒಂದೇ‌’ ಅನ್ನುವ ಮೂಲಕ ತಮ್ಮ ಪಕ್ಷದ ಮುಖಂಡರಿಗೆ ತಿರುಗೇಟು ಕೊಟ್ಟ ಸಚಿವ ಶ್ರೀರಾಮುಲು

0
11

ನ್ಯೂಸ್ ಕನ್ನಡ ವರದಿ: ಎಲ್ಲಾ ದೇವರು ಒಂದೇ‌. ಯೇಸು ಬೇರೆ ಹಿಂದೂ ಮುಸ್ಲಿಂ ದೇವರು ಬೇರೆ ಎಂಬುದಿಲ್ಲ. ದೇವರನ್ನು ಬೇರೆ ಮಾಡಲು ಹೋದರೆ ಅದು ಸ್ವಾರ್ಥ ರಾಜಕಾರಣ ಆಗುತ್ತದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಮ್ಮ ಪಕ್ಷದ ಮುಖಂಡರಿಗೆ ತಿರುಗೇಟು ನೀಡಿದ್ದಾರೆ.

ಮೊಳಕಾಲ್ಮೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಕಾಂಗ್ರೆಸ್ ನಾಯಕರಿಗೂ ಸಹ ಯಾವುದೇ ವಿಷಯ ಇಲ್ಲವಾಗಿದೆ. ಹೀಗಾಗಿ ಯೇಸು ಪ್ರತಿಮೆ ವಿಚಾರದಲ್ಲಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.

LEAVE A REPLY

Please enter your comment!
Please enter your name here