ಶ್ರೀಲಂಕಾದಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರ; ಅಮಾಯಕರ ಮೇಲೆ ದಾಳಿ!

0
194

ನ್ಯೂಸ್ ಕನ್ನಡ ವರದಿ (14-5-2019): 260 ಮಂದಿಯ ಧಾರುಣ ಸಾವಿಗೆ ಕಾರಣವಾದ ಈಸ್ಟರ್ ಸಂಡೇ ಇಸ್ಲಾಮಿಕ್ ಸ್ಟೇಟ್ ಉಗ್ರ ದಾಳಿ ಬೆನ್ನಲ್ಲೇ ಶ್ರೀಲಂಕಾ ಸೇನೆ ನಡೆಸಿದ್ದ ಉಗ್ರ ನಿಗ್ರಹ ಕಾರ್ಯಾಚರಣೆ ಪ್ರಚುರವಾಗಿರುವ ಈ ಸನ್ನಿವೇಶದಲ್ಲೇ ಲಂಕಾದಲ್ಲಿ ಕೋಮು ಸಂಘರ್ಷ ತಾರಕ್ಕೇರಿದೆ, ಮುಂಜಾಗ್ರತಾ ಕ್ರಮವಾಗಿ ಲಂಕಾದಾದ್ಯಂತ ಕರ್ಫ್ಯೂ ಜಾರಿ ಮಾಡಲಾಗಿದೆ.

ಲಂಕಾದಲ್ಲಿ ಮುಸ್ಲಿಮ್ ಸಮುದಾಯದವರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಹಿಂಸಾಚಾರ ಮುಗಿಲು ಮುಟ್ಟಿದ್ದು, ಅಮಾಯಕ ಮುಸ್ಲಿಮರ ಅಂಗಡಿ ಮನೆಗಳನ್ನು ಧ್ವಂಸ ಮಾಡಲಾಗುತ್ತಿದೆ ಎಂದು ರಾಯ್’ಟರ್ಸ್ ಸಂಸ್ಥೆ ವರದಿ ಮಾಡಿದೆ. ಸೋಮವಾರದಿಂದಲೇ ಲಂಕಾದಲ್ಲಿ ಕೋಮುಗಲಭೆ ಆರಂಭವಾಗಿದ್ದು, ನಿನ್ನೆ ಲಂಕಾದ ಕುಲಿಯಪಿತಿಯಾ, ಬಿಂಗಿರಿಯಾ, ದುಮ್ಮಲ ಸುರಿಯಾ ಮತ್ತು ಹೆಟ್ಟಿಪೋಲಾ ಪಟ್ಟಣದಲ್ಲಿ ಕರ್ಫ್ಯೂ ಸಡಿಸಲಾಗಿತ್ತಾದರೂ, ಮತ್ತೆ ಗಲಭೆ ಆರಂಭವಾದ್ದರಿಂದ ಮತ್ತೆ ಕರ್ಫ್ಯೂ ಹೇರಲಾಗಿದೆ.

ದೇಶದೆಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಪರ ಹಾಗೂ ವಿರೋಧಿ ಪೋಸ್ಟ್​ ಗಳು ಹರಿದಾಡುತ್ತಿದ್ದು, ಮುಸ್ಲಿಮರ ಮೇಲೆ ದಾಳಿಗಳು ನಡೆಯುತ್ತಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಲಂಕಾ ಸರ್ಕಾರ ಸೋಮವಾರದಿಂದ ಫೇಸ್ ಬುಕ್ ಹಾಗೂ ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೇಲೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.

LEAVE A REPLY

Please enter your comment!
Please enter your name here