ಯಡಿಯೂರಪ್ಪನವ​ರೇ ಬಾಲ ಮುದುರಿಕೊಂಡು ಕೂತಿದ್ದಾರೆ, ಇನ್ನೂ ಸಿಟಿ.ರವಿ ಏನು ಮಾಡಲು ಸಾಧ್ಯ! ಮಾಜಿ ಸಚಿವ ಟೀಕೆ

0
1341

ನ್ಯೂಸ್ ಕನ್ನಡ ವರದಿ: ತುಮ​ಕೂ​ರಿ​ನಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾಡಿದ ಸಚಿವ ಎಸ್‌.​ಆರ್‌. ಶ್ರೀನಿ​ವಾಸ್‌, ಬಿಜೆ​ಪಿ​ಯ​ವರು ದ್ವೇಷದ ರಾಜ​ಕಾ​ರಣ ಮಾಡು​ತ್ತಿ​ದ್ದಾ​ರೆ. ಇದು ಎಲ್ಲ​ರಿಗೂ ತಿಳಿ​ದಿ​ರುವ ವಿಚಾರ. ಅಮಿತ್‌ ಶಾ ಅವರನ್ನು ಅಹ್ಮದ್‌ ಪಟೇಲ್ ಜೈಲಿಗೆ ಹಾಕಿಸಿದ್ದರು. ಅಹ್ಮದ್‌ ಪಟೇಲ್ ರಾಜ್ಯಸಭೆ ಸದಸ್ಯರಾ​ಗುವ ಕಾಲದಲ್ಲಿ ಅವರನ್ನು ತಪ್ಪಿಸೋಕೆ ಯತ್ನಿಸಿದ್ದರು. ಆ ಸಂದರ್ಭದಲ್ಲಿ ಡಿಕೆಶಿ ಅಲ್ಲಿನ ಗುಜರಾತ್‌ ಶಾಸಕರನ್ನು ರೆಸಾರ್ಟ್‌ಗೆ ಕರೆತಂದು ಅಹ್ಮದ್‌ ಪಟೇಲ್‌ ಅವರ ಗೆಲುವಿಗೆ ಅನುಕೂಲ ಮಾಡಿಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಡಿಕೆಶಿ ಮೇಲೆ ಐಟಿ ರೇಡ್‌ ಆಗಿದೆ ಎಂದು ಗುಡುಗಿದರು.

ಇಡಿಗೂ ಇದಕ್ಕೂ ಸಂಬಂಧವೇ ಇಲ್ಲ.ತೆರಿಗೆ ಕಟ್ಟಲಿಲ್ಲ ಅಂದರೆ ಐಟಿ ನೋಡಿಕೊ​ಳ್ಳು​ತ್ತದೆ. ಇಡಿಯನ್ನು ಕೇಂದ್ರ ದುರುಪಯೋಗ ಮಾಡಿಕೊಂಡು ಪ್ರಬಲರನ್ನು ಧಮನ ಮಾಡುತ್ತಿದೆ ಎಂದರು.

ಅಮಿತ್‌ ಶಾ ಜೊತೆ ಮಾತನಾಡುವ ಶಕ್ತಿ ಸಿ.ಟಿ.ರವಿಗೆ ಇಲ್ಲ. ಸಿಎಂ ಯಡಿಯೂರಪ್ಪಗೂ ಇಲ್ಲ. ಯಡಿಯೂರಪ್ಪನವ​ರೇ ಬಾಲ ಮುದುರಿಕೊಂಡು ಕೂತಿದ್ದಾರೆ, ಸಿಎಂ ದೇ ಏನು ನಡೀತಾ ಇಲ್ಲ. ಅಂಥ​ದ​ರಲ್ಲಿ ಸಿಟಿ ರವಿ ಏನು ಮಾಡು​ವು​ದಕ್ಕೆ ಸಾಧ್ಯ ಎಂದು ಟೀಕಿಸಿದ ಅವರು, ಕೆಲ​ಸದ ಮೇಲೆ ದೆಹ​ಲಿಗೆ ಹೋಗು​ತ್ತಿ​ದ್ದೇನೆ. ಅಲ್ಲಿಂದ ಬಂದನಂತರ ಕೋರ್ಟ್‌ ತೀರ್ಮಾನ ನೋಡಿ ಪ್ರತಿಭಟನೆ ಮಾಡುತ್ತೇವೆ ಎಂದ​ರು.

LEAVE A REPLY

Please enter your comment!
Please enter your name here