Tuesday January 9 2018

Follow on us:

Contact Us
    945

ಯೂಸುಫ್ ಪಠಾಣ್ ಉದ್ದೇಶಪೂರ್ವಕವಾಗಿ ಉದ್ದೀಪನ ಮದ್ದು ಸೇವಿಸಿಲ್ಲ: ಬಿಸಿಸಿಐ

ನ್ಯೂಸ್ ಕನ್ನಡ ವರದಿ-(9.01.18): ನವದೆಹಲಿ: ಭಾರತೀಯ ಕ್ರಿಕೆಟ್ ಮಂಡಳಿ ಆಯೋಗದಿಂದ ನಡೆಸಿದ್ದ ಡೋಪಿಂಗ್ ಟೆಸ್ಟ್ ನಲ್ಲಿ ಫೇಲ್ ಆಗಿರುವ ಭಾರತೀಯ ಆಲ್ ರೌಂಡರ್ ಯೂಸುಫ್ ಪಠಾಣ್ ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.

ಭಾರತೀಯ ತಂಡದ ಕ್ರಿಕೆಟಿಗ ಯೂಸುಫ್ ಪಠಾಣ್ ಮೇಲೆ ಈ ಹಿಂದೆ ನಿಷೇಧಿತ ಉದ್ದೀಪನ ಮದ್ದು ಸೇವನೆ ಆರೋಪ ಕೇಳಿ ಬಂದಿದ್ದು, ಬಿಸಿಸಿಐ ನಿಂದ ಐದು ತಿಂಗಳ ಕಾಲ ಅವರ ಮೇಲೆ ನಿರ್ಭಂಧ ಹೇರಲಾಗಿತ್ತು. ಇದೀಗ ಡೊಂಪಿಂಗ್ ಟೆಸ್ಟ್ ನಲ್ಲಿ ಅವರು ಉದ್ದೇಶ ಪೂರ್ವಕವಾಗಿ ಉದ್ದೀಪನ ಹೊಂದಿರುವ ಔಷಧಿ ತೆಗೆದುಕೊಂಡಿಲ್ಲ ಎಂದು ಬಿಸಿಸಿಐ ಸ್ಪಷ್ಟ ಪಡಿಸಿದೆ.

ಯೂಸುಫ್ ಪಠಾಣ್ ಉದ್ದೀಪನ ಇರುವ ಔಷಧಿ ತೆಗೆದುಕೊಂಡಿಲ್ಲ ಎಂದ ಬಿಸಿಸಿಐ ‘ಅವರು ಕೇವಲ ರೋಗವನ್ನು ನಾಶಮಾಡಿಸುವಂತ ಅಂಶ ಇರುವ ಔಷಧಿ ತೆಗೆದುಕೊಂಡಿದ್ದು, ಅವರು ಆರೋಪ ಮುಕ್ತರಾಗಿದ್ದಾರೆ’ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಇದೀಗ ಮತ್ತೆ ಕ್ರಿಕೆಟ್ ಮೈದಾನಕ್ಕೆ ಗ್ರೀನ್ ಸಿಗ್ನಲ್ ಪಡೆದುಕೊಂಡ ಪಠಾಣ್ ಸಂತಸ ವ್ಯಕ್ತಪಡಿಸಿದ್ದಾರೆ. ಅವರು ‘ನಾನು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದೆ. ಈ ವೇಳೆ ನಾನು ತೆಗೆದ ಔಷಧಿಯಲ್ಲಿ ಟರ್ಬಟೈನ್ ಅಂಶ ಇತ್ತು. ನನಗೆ ತಿಳಿಯದೆ ಇದು ನಡೆದಿದೆ’ ಪಠಾಣ್ ಬಿಸಿಸಿಐ ಗೆ ಉತ್ತರ ನೀಡಿದ್ದರು. ಇನ್ನು ‘ದೇವರು ಇದ್ದಾನೆ. ನನ್ನ ಮೇಲಿರುವ ಆರೋಪ ನಿರಾಧಾರವಾಗಿದ್ದು, ಮತ್ತೆ ಕ್ರಿಕೆಟ್ ಗೆ ತೆರಳುವುದು ನನಗೆ ಸಂತಸ ತಂದಿದೆ’ ಎಂದು ಟ್ವೀಟ್ ಮಾಡಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯವಲ್ಲ: ಸುಪ್ರೀಮ್ ಕೋರ್ಟ್ ಆದೇಶ

ಮುಂದಿನ ಸುದ್ದಿ »

ಪತ್ನಿ ಟಿವಿಯ ರಿಮೋಟ್ ನೀಡಲು ನಿರಾಕರಿಸಿದಳೆಂದು ಆತ್ಮಹತ್ಯೆ ಮಾಡಿಕೊಂಡ ಪತಿ!

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×