Monday October 9 2017

Follow on us:

Contact Us
    59

ಅಂಡರ್17 ಫುಟ್ಬಾಲ್: ಕೊಲಂಬಿಯ ವಿರುದ್ಧ ಭಾರತಕ್ಕೆ ವಿರೋಚಿತ ಸೋಲು

ನ್ಯೂಸ್ ಕನ್ನಡ ವರದಿ-(09.10.17): ಭಾರತದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಅಂಡರ್17 ಫೀಫಾ ಫುಟ್ಬಾಲ್ ಪಂದ್ಯಾಟದಲ್ಲಿ ಕೊಲಂಬಿಯಾ 2-1 ಗೋಲ್ ಗಳಿಂದ ಅತಿಥೇಯ ಭಾರತವನ್ನು ಸೋಲಿಸಿತು.

ಮೊದಲ ಪಂದ್ಯದಲ್ಲಿ 3-0 ಗೋಲ್ ಗಳಿಂದ ಅಮೇರಿಕಾ ತಂಡಕ್ಕೆ ತಲೆಬಾಗಿದ್ದ ಭಾರತ, 2ನೇ ನಿರ್ಣಾಯಕ ಪಂದ್ಯದಲ್ಲಿ ಕೊನೆಯಲ್ಲಿ ಗೋಲ್ ಬಿಟ್ಟುಕೊಟ್ಟು ಭಾರೀ ಬೆಲೆತೆತ್ತಿತು. ರೋಚಕ ಹೋರಾಟದಲ್ಲಿ ಇತ್ತಂಡಗಳು ಹಲವು ಬಾರಿ ಗೋಲ್ ಗಳಿಸುವ ಪ್ರಯತ್ನ ಮಾಡಿತ್ತು. ಈ ಪಂದ್ಯದಲ್ಲಿ ಜುವಾನ್ ಪೆನಲೋಜ 49 ನಿಮಿಷದಲ್ಲಿ ಗೋಲ್ ಹೊಡೆದು ಕೊಲಂಬಿಯಾ 1-0 ಮುನ್ನಡೆಗೆ ಕಾರಣರಾದರು.

ಇತ್ತ ಭಾರತ ತಂಡದ ಆಟಗಾರ ಜಾಕ್ಸನ್ ತೌನೋಜಮ್ 82ನೇ ನಿಮಿಷದಲ್ಲಿ ಗೋಲ್ ಹೊಡೆದು ಸಮಬಲ ಸಾಧಿಸಿದರು. ನಂತರದ ಒಂದೇ ನಿಮಿಷದ ಅಂತರದಲ್ಲಿ ಕೊಲಂಬಿಯಾ ತಂಡದ ಆಟಗಾರ ಜುವಾನ್ ಪೆನಲೋಜ ತನ್ನ ಎರಡನೆ ಗೋಲ್ ಬಾರಿಸಿ ಮೊದಲ ಗೆಲುವು ಸಾಧಿಸಲು ನೆರವಾದರು. ಭಾರತ ತಂಡವು ಕೊನೆಯಲ್ಲಿ ಗೋಲ್ ಬಿಟ್ಟುಕೊಟ್ಟು ಡ್ರಾದಿಂದ ವಂಚಿತರಾದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಗಂಗೂಲಿಯ ತ್ಯಾಗದ ಕಾರಣದಿಂದಲೇ ಧೋನಿಯ ಭವಿಷ್ಯ ಉಜ್ವಲವಾಗಿದೆ: ಸೆಹ್ವಾಗ್

ಮುಂದಿನ ಸುದ್ದಿ »

ಆಸ್ಟ್ರೇಲಿಯಾ ಸರಣಿ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನೆಹ್ರಾ ನಿವೃತ್ತಿ?

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×