Tuesday March 13 2018

Follow on us:

Contact Us
    208

ತ್ರಿಕೋನ ಟಿ-20 ಸರಣಿ: ಶ್ರೀಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ!

ನ್ಯೂಸ್ ಕನ್ನಡ ವರದಿ-(13.3.18): ಕೊಲಂಬೊ: ತ್ರಿಕೋನ ಟಿ20 ಸರಣಿಯಲ್ಲಿ ಭಾರತ ತಂಡ ಶ್ರೀಲಂಕಾದ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್​ ಗೆದ್ದ ಭಾರತ ಮೊದಲು ಫೀಲ್ಡಿಂಗ್​ ಆರಿಸಿಕೊಂಡಿತು. ಮೊದಲು ಬ್ಯಾಟಿಂಗ್​ ಮಾಡಿದ ಶ್ರೀಲಂಕಾ ತಂಡ ನಿಗದಿತ 19 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 152 ರನ್​ ಗಳಿಸಿ ಭಾರತಕ್ಕೆ 153 ರನ್​ ಗುರಿ ನೀಡಿತು. ಭಾರತ ತಂಡ 17.3 ಓವರ್​ಗಳಲ್ಲಿ ಕೇವಲ 4 ವಿಕೆಟ್​ ಕಳೆದುಕೊಂಡು 153 ರನ್​ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.

ಮಳೆಯಿಂದಾಗಿ 19 ಓವರ್‌ಗಳಿಗೆ ಸೀಮಿತಗೊಂಡ ಪಂದ್ಯದಲ್ಲಿ ಶ್ರೀಲಂಕಾ 9 ವಿಕೆಟಿಗೆ 152 ರನ್‌ ಗಳಿಸಿ ಭಾರತಕ್ಕೆ ಸವಾಲೊಡಿತ್ತು. ಸಂಜೆ ಸುರಿದ ಮಳೆಯಿಂದಾಗಿ ಪಂದ್ಯದ ಆರಂಭ 95 ನಿಮಿಷಗಳಷ್ಟು ವಿಳಂಬಗೊಂಡಿತ್ತು.

ದ್ವಿತೀಯ ಸುತ್ತಿನ ಈ ಪಂದ್ಯಕ್ಕಾಗಿ ಭಾರತ ಒಂದು ಬದಲಾವಣೆ ಮಾಡಿಕೊಂಡಿತ್ತು. ರಿಷಬ್‌ ಪಂತ್‌ ಬದಲು ಕೆ.ಎಲ್‌. ರಾಹುಲ್‌ ಅವರನ್ನು ಕಣಕ್ಕಿಳಿಸಿತು. ಶ್ರೀಲಂಕಾ ನಾಯಕ ದಿನೇಶ್‌ ಚಂಡಿಮಾಲ್‌ 2 ಪಂದ್ಯಗಳ ನಿಷೇಧಕ್ಕೊಳಗಾದ್ದರಿಂದ ತಿಸರ ಪೆರೆರ ತಂಡವನ್ನು ಮುನ್ನಡೆಸಿದರು. ಚಂಡಿಮಾಲ್‌ ಬದಲು ವೇಗಿ ಸುರಂಗ ಲಕ್ಮಲ್‌ ಅವರನ್ನು ಆಡುವ ಬಳಗವನ್ನು ಸೇರಿಸಿಕೊಳ್ಳಲಾಯಿತು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ರಾಜಕಾರಣವೆಂದರೆ ಧಾರವಾಹಿಯಲ್ಲಿ ನಟಿಸಿದಂತಲ್ಲ: ಸ್ಮೃತಿ ಇರಾನಿಗೆ ರಾಮಲಿಂಗಾರೆಡ್ಡಿ ಟಾಂಗ್!

ಮುಂದಿನ ಸುದ್ದಿ »

ಮೃತಪಟ್ಟ ಉತ್ತರಪ್ರದೇಶದ ಶಕ್ತಿರಾಮ್: ಮೃತದೇಹ ರವಾನೆಗೆ 73,000ರೂ. ಸಂಗ್ರಹಿಸಿ ನೀಡಿದ ದಾವಣಗೆರೆ ಮುಸ್ಲಿಮರು!

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×