Wednesday January 10 2018

Follow on us:

Contact Us

ಮಂಗಳೂರು: ‘ನ್ಯೂ ಮಾರ್ಕ್ ಟ್ರೋಫಿ’ ಪ್ರೋ ಕಬಡ್ಡಿ ಪಂದ್ಯಾಟಕ್ಕೆ ಸಜ್ಜಾಗುತ್ತಿದೆ ನೆಹರೂ ಮೈದಾನ!

ನ್ಯೂಸ್ ಕನ್ನಡ ವರದಿ: ಕಳೆದ ಒಂದು ದಶಕದಿಂದ ದುಬೈನ ನಂಬರ್ ಒನ್ ಕಬಡ್ಡಿ ತಂಡ ಎಂದೇ ಖ್ಯಾತಿಯಾಗಿರುವ ‘ನ್ಯೂಮಾರ್ಕ್ ಮಂಗಳೂರು‘ ಇವರ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಮಂಗಳೂರಿನ ನೆಹರೂ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್(ರಿ) ಮತ್ತು ಮಂಗಳೂರು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ (ರಿ) ಇದರ ಜಂಟಿ ಆಶ್ರಯದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಉತ್ತರ ಕನ್ನಡ, ಕೊಡಗು ಅಂತರ್ ಜಿಲ್ಲಾ ಮಟ್ಟದ ಪ್ರೋ ಮಾದರಿಯ ಪುರುಷರ ಕಬಡ್ಡಿ ಪಂದ್ಯಾಕೋಟ ನ್ಯೂ ಮಾರ್ಕ್ ಟ್ರೋಫಿ-2018 ಇದೇ ಬರುವ ಜನವರ 13 ಶನಿವಾರ ಬೆಳಗ್ಗೆ 11 ಗಂಟೆಯಿಂದ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿದೆ.

ದುಬೈಯಲ್ಲಿ ಹಲವಾರು ಪ್ರತಿಭಾವಂತ ಅನಿವಾಸಿ ಭಾರತೀಯ ಯುವ ಕಬಡ್ಡಿ ಆಟಗಾರರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವ ವೇದಿಕೆ ಕಲ್ಪಿಸಿದ ‘ನ್ಯೂ ಮಾರ್ಕ್ ಮಂಗಳೂರು’ ತಂಡವು ಜಿಲ್ಲೆಯ ಹಲವು ಹಿರಿಯ, ಅನುಭವಿ ಕಬಡ್ಡಿ ಆಯೋಜಕರ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಹೊನಲು ಬೆಳಕಿನ ಪ್ರೋ ಕಬಡ್ಡಿ ಪಂದ್ಯಕೂಟ ಹಮ್ಮಿಕೊಂಡಿದೆ. 5 ಜಿಲ್ಲೆಗಳ ಅತ್ಯಂತ ಬಲಿಷ್ಠ 16 ತಂಡಗಳು ಪ್ರತಿಷ್ಠಿತ ‘ನ್ಯೂಮಾರ್ಕ್ ಟ್ರೋಫಿ’ ಜಯಿಸಲು ಸಂಪೂರ್ಣ ಸಿಧ್ಧತೆಯಲ್ಲಿ ತೊಡಗಿಸಿಕೊಂಡಿದೆ.

ಪ್ರಥಮ ತಂಡವು ಟ್ರೋಫಿಯೊಂದಿಗೆ ₹1,11,111 ನಗದು, ದ್ವಿತೀಯ ತಂಡವು ₹55,555 ನಗದು ಬಹುಮಾನ ಪಡೆಯಲಿದೆ. ತೃತೀಯ ₹33,000, ಚತುರ್ಥ ₹33,000, ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ, ಉತ್ತಮ ಸವ್ಯಸಾಚಿ, ಶಿಸ್ತುಬದ್ಧ ತಂಡ ತಲಾ ₹5000 ನಗದು ಬಹುಮಾನ ಪಡೆಯಲಿದೆ. ಪಂದ್ಯಾಟದ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭದಲ್ಲಿ ಕರ್ನಾಟಕದ ಸರಕಾರದ ಸಚಿವರು, ಶಾಸಕರು ಸೇರಿದಂತೆ ಅನೇಕ ರಾಜಕೀಯ, ಸಾಮಾಜಿಕ ನೇತಾರರು, ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಈ ರೋಚಕ ಪಂದ್ಯಾಟವು Youtube ಮತ್ತು Facebook ನಲ್ಲಿ ನೇರಪ್ರಸಾರ ಕಾಣಲಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಆರೆಸ್ಸೆಸ್ ಮತ್ತು ಬಜರಂಗದಳದವರು ಉಗ್ರಗಾಮಿಗಳು: ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಂದಿನ ಸುದ್ದಿ »

ಮಸಾಜ್ ಪಾರ್ಲರ್ ಪ್ರಕರಣ: ಸಾಧುಕೋಕಿಲಾಗೆ ನಿರೀಕ್ಷಣಾ ಜಾಮೀನು ಮಂಜೂರು

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×