Sunday November 12 2017

Follow on us:

Contact Us
    184

ದುಬೈನಲ್ಲಿ ‘ಎಂ ಎಸ್ ಧೋನಿ ಕ್ರಿಕೆಟ್ ಅಕಾಡೆಮಿ’ಗೆ ಚಾಲನೆ ನೀಡಿದ ಧೋನಿ

ದುಬೈ(ನ.12): ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ತಮ್ಮ ಹೆಸರಿನಲ್ಲಿ ಸಿದ್ಧಗೊಂಡಿರುವ ಮೊದಲ ಗ್ಲೋಬಲ್ ಕ್ರಿಕೆಟ್ ಅಕಾಡೆಮಿಗೆ ಶನಿವಾರ ಚಾಲನೆ ನೀಡಿದರು.
ದುಬೈ ಮೂಲದ ಪೆಸಿಫಿಕ್ ಸ್ಪೋರ್ಟ್ಸ್ ಕ್ಲಬ್ ಮತ್ತು ಅರ್ಕ ಸ್ಪೋರ್ಟ್ ಕ್ಲಬ್ ಜತೆಗೂಡಿ ಎಂಎಸ್ ಧೋನಿ ಕ್ರಿಕೆಟ್ ಅಕಾಡೆಮಿ (ಎಂಎಸ್ ಡಿಸಿಎ)ಯನ್ನು ಸ್ಥಾಪಿಸಿದ್ದು, ಭಾರತದ ಕೋಚ್’ಗಳು ಅಲ್ಲಿ ತೆರಳಿ ತರಬೇತಿ ನೀಡಲಿದ್ದಾರೆ.

ಮುಂಬೈ ತಂಡದ ಮಾಜಿ ಬೌಲರ್ ವಿಶಾಲ್ ಮಹದಿಕ್, ಕೋಚ್‌ಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. 4 ಟರ್ಫ್, 3 ಸಿಮೆಂಟ್ ಮತ್ತು 3 ಮ್ಯಾಟ್ ಪಿಚ್‌ಗಳು, ಸ್ಪಿನ್ ಮತ್ತು ಸ್ವಿಂಗ್ ಬೌಲಿಂಗ್ ಯಂತ್ರಗಳು, ಹಗಲು ರಾತ್ರಿ ಪಂದ್ಯಗಳನ್ನಾಡಲು ಅನುಕೂಲವಾಗಲು ಲೈಟ್ಸ್ ವ್ಯವಸ್ಥೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಈ ಅಕಾಡೆಮಿ ಹೊಂದಿದೆ. ಇದರ ಜತೆಗೆ ಅಕಾಡೆಮಿ ನಿರಂತರವಾಗಿ ಪಂದ್ಯಗಳ ಹಾಗೂ ಪಂದ್ಯಾವಳಿಗಳ ಆಯೋಜನೆ ಮೂಲಕ ಆಟಗಾರರಿಗೆ ಸೂಕ್ತ ತರಬೇತಿ ನೀಡುವುದು. ಅವರಲ್ಲಿನ ಪ್ರತಿಭೆಯನ್ನು ಬೆಳಕಿಗೆ ತರಲು ಶ್ರಮಿಸಲಾಗುವುದು ಎಂದು ಅಕಾಡೆಮಿ ತಿಳಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಧೋನಿ, ‘ಈ ಯೋಜನೆಯ ಭಾಗವಾಗಿರುವುದು ಅತ್ಯಂತ ಸಂತಸವನ್ನುಂಟು ಮಾಡಿದೆ. ಕ್ರಿಕೆಟ್‌ಗೆ ಎಷ್ಟು ಸಾಧ್ಯವೋ ಅಷ್ಟು ಕೊಡುಗೆ ನೀಡುವುದು ನನ್ನ ಕನಸಾಗಿದೆ. ಈ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆ’ ಎಂದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಈಶ್ವರಪ್ಪನವರ ತಲೆ ಮತ್ತು ಬಾಯಿಗಿರುವ ಕನೆಕ್ಷನ್ ತಪ್ಪಿದೆ: ಎಂ.ಬಿ ಪಾಟೀಲ್

ಮುಂದಿನ ಸುದ್ದಿ »

ಮೋದಿ ಆಳ್ವಿಕೆಯಲ್ಲಿ ದೇಶದಲ್ಲಿ ಎದ್ದು ನಿಂತು ಮಾತನಾಡುವುದು ಕಷ್ಟವಾಗಿದೆ: ಪ್ರಕಾಶ್ ರೈ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×