Tuesday February 13 2018

Follow on us:

Contact Us
    321

ಭಾರತ ತಂಡದ ಅಭಿಮಾನಿ ನನ್ನ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದಾರೆ: ಇಮ್ರಾನ್ ತಾಹಿರ್

ನ್ಯೂಸ್ ಕನ್ನಡ ವರದಿ: ಸದ್ಯ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಕ್ರಿಕೆಟ್ ಪಂದ್ಯಾಟವು ನಡೆಯುತ್ತಿದ್ದು, ಮೊನ್ನೆ ತಾನೇ ನಡೆದ ಏಕದಿನ ಪಂದ್ಯಾಟದಲ್ಲಿ ಭಾರತ ತಂಡದ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಜಯ ಸಾಧಿಸಿತ್ತು. ಇದೀಗ ಈ ಪಂದ್ಯಾಟಗಳ ನಡುವೆ ಜನಾಂಗೀಯ ನಿಂದನೆಯ ಆರೋಪವೊಂದು‌ ಕೇಳಿ ಬಂದಿದೆ. ಈ ಹಿಂದೆ ಆಫ್ರಿಕಾ‌ ತಂಡದ ಆಟಗಾರ ಹಾಶಿಮ್ ಅಮ್ಲಾ ರನ್ನು ಭಯೋತ್ಪಾದಕ ಎಂದು‌ ಕರೆಯಲಾಗಿತ್ತು. ಇದೀಗ ಆಫ್ರಿಕಾ ತಂಡದ ಇನ್ನೋರ್ವ ಆಟಗಾರ ಇಮ್ರಾನ್ ತಾಹಿರ್ ರನ್ನು ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಯೋರ್ವರು ಜನಾಂಗೀಯ ನಿಂದನೆ ಮಾಡಿದ್ದಾರೆಂದು ಟೀಮ್ ಮ್ಯಾನೇಜರ್ ಆರೋಪಿಸಿದ್ದಾರೆ.

ಮೊನ್ನೆ ತಾನೇ ನಡೆದ ಏಕದಿನ ಕ್ರಿಕೆಟ್ ಪಂದ್ಯಾಟದಲ್ಲಿ ಇಮ್ರಾನ್ ತಾಹಿರ್ ಭಾಗಿಯಾಗಿರಲಿಲ್ಲ. 12ನೇ ಆಟಗಾರನಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಪೆವಿಲಿಯನ್ ಬಳಿ ಭಾರತೀಯ ತಂಡದ ಧಿರಿಸು ಧರಿಸಿದ್ದ ಅಭಿಮಾನಿಯೋರ್ವ ಇಮ್ರಾನ್ ತಾಹಿರ್ ‌ಕುರಿತು ಜನಾಂಗೀಯ ನಿಂದನೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಆಫ್ರಿಕಾ ತಂಡದ ಟೀಮ್ ಮ್ಯಾನೇಜರ್ ಮುಹಮ್ಮಸ್ ಮೂಸಾಜಿ ಆರೋಪ ವ್ಯಕ್ತಪಡಿಸಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಪ್ರಕೃತಿ ವಿಕೋಪ ಸಮಸ್ಯೆ ಪರಿಹಾರಕ್ಕೆ ಹನುಮಾನ್ ಚಾಲೀಸ ಪಠಿಸಿ: ಬಿಜೆಪಿ ನಾಯಕನಿಂದ ರೈತರಿಗೆ ಸಲಹೆ!

ಮುಂದಿನ ಸುದ್ದಿ »

ಮಾಂಸ ತಿಂದು ನರಸಿಂಹ ಸ್ವಾಮಿ ದರ್ಶನ, ಹಿಂದೂಗಳ ಭಾವನೆಗೆ ರಾಹುಲ್ ಧಕ್ಕೆ!: ಯಡ್ಡಿ ಆರೋಪ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×