Tuesday February 13 2018

Follow on us:

Contact Us
    764

ವೇಗಿ ಜಸ್ಪ್ರೀತ್ ಬುಮ್ರಾ ಯಾರ್ಕರ್ ಗೆ ಕ್ಲೀನ್ ಬೌಲ್ಡ್ ಆದ ನಟಿ ಯಾರು ಗೊತ್ತೇ?

ನ್ಯೂಸ್ ಕನ್ನಡ ವರದಿ-(13.2.18): ಹೈದರಾಬಾದ್: ಕ್ರಿಕೆಟ್ ಆಟಗಾರರಿಗೂ ಸಿನೆಮಾ ತಾರೆಯರಿಗೂ ಅದ್ಯಾಕೋ ಎಲ್ಲಿಲ್ಲದ ನಂಟು. ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಆಯ್ತು ಇದೀಗ ಟೀಂ ಇಂಡಿಯಾದ ಜಸ್ಪ್ರೀತ್ ಬೂಮ್ರಾ ಕೂಡ ಸಿನೆಮಾ ನಟಿಯೊಬ್ಬರ ಮನ ಗೆದ್ದಿದ್ದಾರೆ.

ಹೌದು, ಟೀಂ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿರುವ ಬೂಮ್ರಾ ತೆಲುಗು ನಟಿ ರಾಶಿ ಕನ್ನಾಗೆ ಸಖತ್ ಫಿದಾ ಆಗಿದ್ದಾರಂತೆ. ಅವರ ಪ್ರತಿಯೊಂದು ಆಟವನ್ನು ಕೂಡ ತಪ್ಪದೇ ನೋಡುತ್ತಿರುವ ನಟಿ ಕನ್ನಾ ಬೂಮ್ರಾರನ್ನು ಲವ್ ಮಾಡುತ್ತಿರುವುದಾಗಿ ಹೇಳಿರುವ ವೀಡಿಯೋ ಒಂದು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿ ಬೂಮ್ರಾ ನಿದ್ದೆ ಗೆಡಿಸಿದೆ.

ಈ ಕುರಿತು ಬೂಮ್ರಾ ಈವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.ಆದರೆ ನಟಿ ಮಾತ್ರ ನಾನು ಅವರನ್ನು ಲವ್ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಹಲವು ಸಿನೆಮಾಗಳಲ್ಲಿ ಕಾಣಿಸಿಕೊಂಡಿರುವ ನಟಿ ಕನ್ನಾ ಜಾನ್ ಅಬ್ರಾಮ್ ಅಭಿನಯದ ಚಿತ್ರ ‘ಮದ್ರಾಸ್ ಕೆಫೆ’ ಯಲ್ಲಿ ಗುರುತಿಸಿಕೊಂಡಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಸಿದ್ದರಾಮಯ್ಯ ಅಪರಾಧ ರಹಿತ, ಕಳಂಕ ರಹಿತ ಮುಖ್ಯಮಂತ್ರಿ!: ಎಡಿಆರ್‌ ವರದಿ

ಮುಂದಿನ ಸುದ್ದಿ »

ಗಂಟಲಲ್ಲಿ ಸಿಲುಕಿಕೊಂಡ ಅವಲಕ್ಕಿ: ಮೂರು ವರ್ಷದ ಮಗು ಮೃತ್ಯು!

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×