ಬಿಎಸ್ಪಿ-ಎಸ್ಪಿ ಮೈತ್ರಿ ಮುಂದುವರಿದರೆ ಉತ್ತರಪ್ರದೇಶದಲ್ಲಿ ನಮಗೆ ಗೆಲುವು ಖಚಿತ: ಮುಲಾಯಂ ಸಿಂಗ್ ಯಾದವ್

0
501

ನ್ಯೂಸ್ ಕನ್ನಡ ವರದಿ(11-04-2018): ಉತ್ತರ ಪ್ರದೇಶದಲ್ಲಿ ಎಸ್ಪಿ ಬಿಎಸ್ಪಿ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸಿದರೆ ನಮಗೆ ಗೆಲುವು ಖಚಿತ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಹೇಳಿದ್ದಾರೆ.

ಎಸ್ಪಿ ಬಿಎಸ್ಪಿ ಪಕ್ಷಗಳ ಮೈತ್ರಿಯ ಕುರಿತು ಪ್ರಥಮ ಬಾರಿಗೆ ಮೌನ ಮುರಿದಿರುವ ಮುಲಾಯಂ ಸಿಂಗ್ , ಈ ಮೈತ್ರಿ ಲೇಕಸಭಾ ಚುನಾವಣೆಯಲ್ಲೂ ಮುಂದುವರಿಯಲಿ ಎಂದಿದ್ದಾರೆ ಮಾತ್ರವಲ್ಲ ಟಿಕೆಟ್ ಹಂಚಿಕೆಯ ವಿಶಯದಲ್ಲಿ ಇನ್ಯಾವುದೇ ವಿಶಯದಲ್ಲೂ ಉಭಯ ಪಕ್ಷಗಳಲ್ಲಿ ಭಿನ್ನಾಬಿಪ್ರಾಗಳು ಉಂಟಾಗಬಾರದು ಎಂದು ಹೇಳಿದರು. 23 ವರ್ಷಗಳ ನಂತರ ರಾಜ್ಯದಲ್ಲಿ ಎಸ್ಪಿ ಬಿಎಸ್ಪಿ ಪಕ್ಷಗಳು ಮೈತ್ರಿಮೀಡಿಕೊಂಡಿರುವುದನ್ನು ಸ್ವಾಗತಿಸುತ್ತೇನೆ ಎಂದರು.

ತಾನು ಸಮಾದವಾದಿ ಪಕ್ಷದ ಅಧ್ಯಕ್ಷನಾಗಿರುವವರೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ನೊಂದಿಗೆ ಅಂತರ ಕಾಯ್ದುಕೊಂಡಿದ್ದ ಮುಲಾಯಮ್ ಸಿಂಗ್, ಕಳೆದ ಚುನಾವಣೆಯಲ್ಲಿ ಮಗ ಅಖಿಲೇಶ್ ಯಾದವ್ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ವಿರೋಧಿಸಿದ್ದರು.

LEAVE A REPLY

Please enter your comment!
Please enter your name here