ಕೇಂದ್ರ ಸರ್ಕಾರ ಜನಾದೇಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ; ಮೋದಿ ವಿರುದ್ಧ ಗುಡುಗಿದ ಸೋನಿಯಾ ಗಾಂಧಿ

0
402

ನ್ಯೂಸ್ ಕನ್ನಡ ವರದಿ ನವದೆಹಲಿ: ಬಿಜೆಪಿಯು ತನಗೆ ದೊರೆತಿರುವ ಬಹುಮತವನ್ನು ಅತ್ಯಂತ ಅಪಾಯಕಾರಿ ಮಟ್ಟದಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿಯ ದುಷ್ಟ ಕಾರ್ಯಸೂಚಿಯನ್ನು ಬಯಲಿಗೆ ಎಳೆಯಲು ನಾವು ಚಳವಳಿ ಹುಟ್ಟುಹಾಕಬೇಕು’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆ ನೀಡಿದ್ದಾರೆ.

ನವ ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಮಹಾತ್ಮಾ ಗಾಂಧಿ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಕಾಂಗ್ರೆಸ್ ಹಮ್ಮಿಕೊಳ್ಳುವ ವಿವಿಧ ಕಾರ್ಯಕ್ರಮಗಳ ಕುರಿತು ಚರ್ಚೆ ಸಂಬಂಧ ಇಂದು ಸಭೆಯಲ್ಲಿ ಅವರು ಈ ಮಾತು ಹೇಳಿದ್ದಾರೆ.

‘ಕೇಂದ್ರ ಸರ್ಕಾರ ಜನರು ನೀಡಿದ ಆದೇಶವನ್ನು ಅತ್ಯಂತ ಅಪಾಯಕಾರಿಯಾದ ಶೈಲಿಯಲ್ಲಿ ತಪ್ಪಾಗಿ ಬಳಸಿಕೊಳ್ಳುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮಾ ಗಾಂಧಿ, ಅಂಬೇಡ್ಕರ್, ಸರ್ದಾರ್ ವಲ್ಲಭಾಯಿ ಪಟೇಲ್ ಅವರಂತಹ ನಾಯಕರ ನೈಜ ಸಂದೇಶವನ್ನು ತಪ್ಪಾಗಿ ಅರ್ಥೈಸುವ ಏಕೈಕ ಗುರಿಯನ್ನು ಬಿಜೆಪಿ ತನ್ನ ಕಾರ್ಯಸೂಚಿಯಾಗಿ ಬದಲಿಸಿಕೊಂಡಿದೆ’ ಎಂದು ಕಿಡಿಕಾರಿದರು.

ಪ್ರಜಾಪ್ರಭುತ್ವವು ಈ ಹಿಂದೆ ಎಂದೂ ಇಷ್ಟು ಅಪಾಯದಲ್ಲಿ ಇರಲಿಲ್ಲ. ಸಂಯಮದಿಂದ ಇರಬೇಕು ಎಂಬ ನಮ್ಮ ದೃಢನಿಶ್ಚಯವನ್ನು ಬಿಜೆಪಿ ಪರೀಕ್ಷಿಸುತ್ತಲೇ ಇದೆ. ನಾವು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದರೆ ಸಾಲದು. ಜನರ ಬಳಿ ಹೋಗಬೇಕು. ನಾವು ಧೈರ್ಯವಾಗಿ ಬೀದಿಗೆ ಇಳಿದು ಹೋರಾಡಬೇಕು. ಹಳ್ಳಿಹಳ್ಳಿಗಳಲ್ಲಿ ಹೋರಾಡಬೇಕು. ಪಟ್ಟಣ-ನಗರಗಳಲ್ಲಿ ಹೋರಾಡಬೇಕು’ ಎಂದು ಅವರು ಕರೆ ನೀಡಿದ್ದಾರೆ.

ಸೋನಿಯಾ ಗಾಂಧಿ ಅವರು ದೇಶದಲ್ಲಿ ಚಾಲ್ತಿಯಲ್ಲಿರುವ ಆರ್ಥಿಕ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು, ನಷ್ಟವು ಹೆಚ್ಚಾಗುತ್ತಿದೆ.ಸರ್ಕಾರ ಜನರ ಸಾಮಾನ್ಯರ ವಿಶ್ವಾಸದೊಡನೆ ಆಟವಾಡುತ್ತಿದೆ.ಆರ್ಥಿಕ ಜಗತ್ತಿನಲ್ಲಿ ಚ್ಚುತ್ತಿರುವ ನಷ್ಟಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರವು ಬೇರೆ ಬೇರೆ ಕಾರ್ಯತಂತ್ರ ಬಳಸುತ್ತಿದೆ ಎಂದು ಅವರು ಹೇಳಿದ್ದಾರೆ.

ಮಾಜಿ ಪ್ರಧಾನಿ ಸಿಂಗ್ ಮಾತನಾಡಿ “ನಾವು ಅಪಾಯಕಾರಿಯಾದ ಸುದೀರ್ಘಾವಧಿಯ ಕೆಟ್ಟ ಪರಿಸ್ಥಿತ್ಯಲ್ಲಿದ್ದೇವೆ. ಆರ್ಥಿಕತೆ ಸ್ವಲ್ಪ ಕೆಟ್ತ ಸ್ಥಿತಿಯಿಂದ ಇನ್ನಷ್ಟು ತೀವ್ರ ಕೆಟ್ಟಸ್ಥಿತಿಯತ್ತ ಧಾವಿಸುತ್ತಿದೆ. ಸರ್ಕಾರ ಇದನ್ನು ಅರಿತುಕೊಳ್ಳುತ್ತಿಲ್ಲ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಇದು ಕೆಟ್ಟ ಪರಿಣಾಮವನ್ನು ಬೀರಲಿದೆ” ಎಂದಿದ್ದಾರೆ.

LEAVE A REPLY

Please enter your comment!
Please enter your name here