ಮದುವೆಯಾದ ಸೋನಮ್ ಗೆ ಬೆಡ್ ರೂಮ್ ಹೋಗುವ ಮುಂಚೆಯೇ ಷರತ್ತು ವಿಧಿಸಿದ ಗಂಡ! ಏನದು ಗೊತ್ತೇ?

0
2568

ನ್ಯೂಸ್ ಕನ್ನಡ ವರದಿ: ಬಾಲಿವುಡ್ ಹಿರಿಯ ನಾಯಕ ನಟ ಅನಿಲ್ ಕಪೂರ್ ಮಗಳಾದ ನಟಿ ಸೋನಮ್ ಕಪೂರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ, ಮಂಗಳವಾರದಂದು ಸೋನಮ್ ಬಾಂದ್ರಾದಲ್ಲಿರುವ ತನ್ನ ಆಂಟಿಯ ಬಂಗಲೆಯಲ್ಲಿ ಸಿಖ್ ಸಂಪ್ರದಾಯದಂತೆ ಆನಂದ್ ಅಹುಜಾ ಅವರನ್ನು ಮದುವೆಯಾಗಿದ್ದಾರೆ. ಮದುವೆಯೇನೋ ಆಯಿತು ಆದರೆ ಮದುವೆ ಆಗೋಕೆ ಮುಂಚೆನೇ ಸೋನಮ್ ಕಪೂರ್ ಭಾವಿ ಪತಿ ಬೆಡ್ ರೂಮ್ ಹೋಗೋ ಮುಂಚೆ ಪಾಲಿಸಬೇಕಾದ ಷರತ್ತನ್ನು ವಿಧಿಸಿದ್ದಾರೆ.

ಹೌದು, ಆಶ್ಚರ್ಯವಾದರೂ ಸತ್ಯ! ಈ ಬಗ್ಗೆ ಸ್ವತಹ ಸೋನಮ್ ಕಪೂರ್ ಬಾಲಿವುಡ್ ಮ್ಯಾಗಝೀನ್ ಗೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ‘ಬೆಡ್ ರೂಮ್‍ಗೆ ಹೋಗುವ ಮೊದಲು ಎಂದರೆ ಮಲಗಲು ಹೋಗುವಾಗ ನಾವಿಬ್ಬರು ಮೊಬೈಲ್ ಬಳಸಬಾರದು ಎಂದು ಷರತ್ತು ಹಾಕಿದ್ದಾರೆ. ರೂಮಿನಲ್ಲಿ ಮಲಗಲು ಹೋಗುವಾಗ ಆನಂದ್‍ಗೆ ನಾವಿಬ್ಬರೇ ಇರುವುದು ಇಷ್ಟ. ನಮ್ಮ ಮಧ್ಯೆ ಮೊಬೈಲ್ ಇರುವುದು ಅವರಿಗೆ ಇಷ್ಟವಿಲ್ಲ’ ಎಂದು ಸೋನಮ್ ಹೇಳಿದ್ದಾರೆ.

ಇದಕ್ಕೆ ಕಾರಣವೂ ಇದೆ, ಹೇಳಿಕೇಳಿ ನಟಿ ಸೋನಮ್ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯವಾಗಿ ಇರುತ್ತಾರೆ ಮತ್ತು ಬಾಲಿವುಡ್ ನವರೇ ಇರುವ ಚಾಟ್ ಗ್ರೂಪ್ಸ್ ವಾಟ್ಸಪ್ ಗ್ರೂಪಿನಲ್ಲಿಯೂ ಕರೀನಾ ಕಪೂರ್ ಮತ್ತು ಸೋನಮ್ ಕಪೂರ್ ರದ್ದೇ ರಾಜ್ಯಭಾರ. ಎಲ್ಲರಿಗೂ ಟಾಂಗ್ ನೀಡುತ್ತಾ ಕಾಲೆಳೆಯುವ ಕೆಲಸ ಮಾಡುತ್ತಾ ಇರುತ್ತಾಳೆ ಎಂದೇ ಸೋನಮ್ ಬಗ್ಗೆ ಬಾಲಿವುಡ್ ಮಂದಿಯ ದೂರು. ಹೀಗಿರುವಾಗ ಮದುವೆಯಾದ ನಂತರ ಈಕೆ ಬೆಡ್ ರೂಮಿನಲ್ಲೂ ಮೊಬೈಲ್ ಹಿಡಿದು ಗಾಸಿಪ್ ಮಾಡುತ್ತಾ ಕುಳಿತರೆ ಕಷ್ಟ ಎಂದು ಮೊದಲೇ ಈ ಷರತ್ತು ವಿಧಿಸಿದ್ದಾರೆ ಆನಂದ ಅಹುಜಾ! ಷರತ್ತನ್ನು ಒಪ್ಪಿದ್ದಾರೆ ಸೋನಮ್ ಕಪೂರ್.

LEAVE A REPLY

Please enter your comment!
Please enter your name here