ಮಂಡ್ಯ: 18,000 ಮತಗಳ ಮುನ್ನಡೆಯನ್ನು ಪಡೆದುಕೊಂಡ ಸುಮಲತಾ!

0
167

ನ್ಯೂಸ್ ಕನ್ನಡ ವರದಿ: (23.05.19) ಇಂದು ಲೋಕಸಭಾ ಚುನಾವಣೆಯ ಫಲಿತಾಂಶ ಎಣಿಕೆ ಕಾರ್ಯ ದೇಶಾದ್ಯಂತ ನಡೆಯುತ್ತಿದೆ. ಎಕ್ಸಿಟ್ ಪೋಲ್ ಗಳಲ್ಲಿ ಹೇಳಿದಂತೆ ಬಿಜೆಪಿ ಪಕ್ಷವು ಇದೀಗ ಭಾರೀ ಮುನ್ನಡೆಯನ್ನು ಸಾಧಿಸಿದೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾದರೂ ಕೂಡಾ ಬಿಜೆಪಿ ಕರ್ನಾಟಕದಲ್ಲೂ ಭಾರೀ ಮುನ್ನಡೆಯನ್ನು ಸಾಧಿಸಿದೆ. ಇದೀಗ ಒಟ್ಟು 344 ಕ್ಷೇತ್ರಗಳಲ್ಲಿ ಎನ್ಡಿಎ ಮುನ್ನಡೆ ಸಾಧಿಸಿದೆ. ಇದೀಗ ಬಹಳ ಕುತೂಹಲಕಾರಿ ಕ್ಷೇತ್ರವಾಗಿದ್ದ ಮಂಡ್ಯದಲ್ಲಿ ಜಿದ್ದಾ ಜಿದ್ದಿನ ಪೈಪೋಟಿಯ ನಡುವೆ ಸುಮಲತಾ ಅಂಬರೀಶ್ ನಿಖಿಲ ಕುಮಾರಸ್ವಾಮಿ ವಿರುದ್ಧ ಭಾರೀ ಮುನ್ನಡೆ ಗಳಿಸಿದ್ದಾರೆ. ಒಟ್ಟು 18,000 ಮತಗಳ ಮುನ್ನಡೆಯನ್ನು ಸುಮಲತಾ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಯುಪಿಎ: 89
ಎನ್ಡಿಎ: 345
ಇತರ: 108

ಕರ್ನಾಟಕ

ಬಿಜೆಪಿ: 23
ಕಾಂಗ್ರೆಸ್: 3
ಜೆಡಿಎಸ್: 1
ಇತರ: 1

LEAVE A REPLY

Please enter your comment!
Please enter your name here