ನನಗೆ ಮಂಪರು ಪರೀಕ್ಷೆ ಮಾಡುವುದು ಇಷ್ಟವಿಲ್ಲ: ನ್ಯಾಯಾಧೀಶರಿಗೆ ಪತ್ರ ಬರೆದ ಹೊಟ್ಟೆ ಮಂಜ!

0
770

ನ್ಯೂಸ್ ಕನ್ನಡ ರಿ(15-04-2018):ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಮಂಪರು ಪರೀಕ್ಷೆಗೆ ಸಮ್ಮತಿಸಿದ್ದ ಗೌರಿ ಲಂಕೇಶ್ ಹತ್ಯೆಯ ಶಂಕಿತ ಆರೋಪಿ ನವೀನ್ ಅಲಿಯಾಸ್ ಹೊಟ್ಟೆ ಮಂಜ ಈಗ ಪುನಃ ಯೂಟರ್ನ್ ಹೊಡೆದಿದ್ದು ನನಗೆ ಮಂಪರು ಪರೀಕ್ಷೆ ಮಾಡುವುದು ಇಷ್ಟವಿಲ್ಲ ಎಂದು ಜೈಲಿನಿಂದ ನ್ಯಾಧೀಶರಿಗೆ ಪತ್ರ ಬರೆದಿದ್ದಾನೆ.

ಎಸ್ಐಟಿ ಅಧಿಕಾರಿಗಳ ಒತ್ತಡಕ್ಕೆ ಮಣಿದು ನಾನು ಮಂಪರು ಪರೀಕ್ಷೆಗೆ ಒಪ್ಪಿದ್ದೆ. ಮಂಪರು ಪರೀಕ್ಷೆಗೆ ಒಪ್ಪದಿದ್ದಲ್ಲಿ ಬೇಲ್ ಸಿಗದಂತೆ ಮಾಡುತ್ತೇವೆ ಎಂದು ನನಗೆ ಬೆದರಿಕೆ ಹಾಕಿದ್ದರು. ಈಗ ನಾನು ತುಂಬಾ ಆಲೋಚಿಸಿ ಬರೆಯುತ್ತಿದ್ದೇನೆ. ನನಗೆ ಮಂಪರು ಪರೀಕ್ಷೆ ಮಾಡುವುದು ಬೇಡ ನನಗದು ಇಷ್ಚವಿಲ್ಲ ಎಂದು ನವೀನ್ ಪತ್ತದಲ್ಲಿ ಬರೆದಿದ್ದಾನೆ.

ಮಾನ್ಯ ನ್ಯಾಯಾಧೀಶರು ಈ ಹಿಂದೆ ಮಂಪರು ಪರೀಕ್ಷೆಗೆ ನೀಡಿದ್ದ ಆದೇಶವನ್ನು ತೆಡೆಹಿಡಿಯಬೇಕೆಂದು ನ್ಯಾಯಾಧೀಶರಲ್ಲಿ ಆರೋಪಿ ನವೀನ್ ಮನವಿ ಮಾಡಿಕೊಂಡಿದ್ದಾನೆ.

LEAVE A REPLY

Please enter your comment!
Please enter your name here