ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ, ನಾನು ಬಿಜೆಪಿಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ: ಯಶ್ವಂತ್ ಸಿನ್ಹಾ

0
3608

ನ್ಯೂಸ್ ಕನ್ನಡ ವರದಿ-(21.04.18): ಬಿಜೆಪಿಯ ಹಿರಿಯ ಬಂಡುಕೋರ ನಾಯಕ.ಹಾಗೂ ಕೇಂದ್ರದ ಮಾಜಿ ಸಚಿವ ಯಶ್ವಂತ್ ಸಿನ್ಹಾ ಕೊನೆಗೂ ಬಿಜೆಪಿ ತೊರೆಯುವುದಾಗಿ ಹೇಳಿದ್ದಾರೆ. ನಿನ್ನೆ ಕಾಂಗ್ರೆಸ್ ಹಾಗೂ ಆರ್ ಜೆಡಿ ಮುಖಂಡರನ್ನೊಳಗೊಂಡ ರಾಷ್ಟ್ರ ಮಂಚ್ ಸಭೆಯಲ್ಲಿ ಅವರು ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ದೇಶದ ಪ್ರಜಾಪ್ರಭುತ್ವವು ಅಪಾಯದಲ್ಲಿದ್ದು, ನಾನು ರಾಜಕೀಯ ಪಕ್ಷಗಳಿಂದ ದೂರವಿರಲು ಬಯಸುತ್ತೇನೆ. ಬಿಜೆಪಿಯೊಂದಿಗಿನ ನನ್ನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳಲು ನಾನು ಇಚ್ಚಿಸುತ್ತೇನೆ ಎಂದರು.

ವಾಜಪೇಯಿ ಪ್ರಧಾನಿಯಾಗಿದ್ದಾಗ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಸಂಸತ್ ಅಧಿವೇಶನವು ಸಾಂಗವಾಗಿ ನಡೆಯುತ್ತಿತ್ತು. ಆದರೆ ಈಗಿನ ಪ್ರಧಾನಿಗೆ ವಿರೋಧ ಪಕ್ಷದ ನಾಯಕರನ್ನು ಕರೆದು ಮತನಾಡುವ ಕನಿಷ್ಠ ಸೌಜನ್ಯವಾದರೂ ಬೇಡವೇ ಎಂದು ಪ್ರಶ್ನಿಸಿದರು.

LEAVE A REPLY

Please enter your comment!
Please enter your name here