ನನ್ನದು ಶಾಶ್ವತ ಯೋಜನೆಗಳು, ಯಾವುದೇ ಸರ್ಕಾರವಾದರೂ ಅದನ್ನು ನಿಲ್ಲಿಸಲಿ, ನೋಡೋಣ: ಸಿದ್ದರಾಮಯ್ಯ

0
158

ನ್ಯೂಸ್ ಕನ್ನಡ ವರದಿ(14.5.19): ನಾನು ಸರಕಾರ ನಡೆಸುತ್ತಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಯಾವುದೇ ಯೋಜನೆಗಳು ಕೂಡಾ ತಾತ್ಕಾಲಿಕ ಯೋಜನೆಗಳಲ್ಲ. ನಾನು ಜಾರಿಗೆ ತಂದ ಯೋಜನೆಗಳೆಲ್ಲವೂ ಶಾಶ್ವತ ಯೋಜನೆಗಳು. ಅನ್ನಭಾಗ್ಯ, ಕ್ಷೀರ ಭಾಗ್ಯ, ಕೃಷಿ ಭಾಗ್ಯ, ಪಶುಭಾಗ್ಯ, ಮುಂತಾದ ಯೋಜನೆಗಳನ್ನು ಯಾವುದೇ ಸರಕಾರವಾದರೂ ನಿಲ್ಲಿಸಲಿ ನೋಡೋಣ… ಜಾಗೃತ ಮತದಾರರು ಇರುವವರೆಗೂ ಇವೆಲ್ಲಾ ಶಾಶ್ವತ ಯೋಜನೆಗಳು. ಟೀಕಾಕಾರರಿಗೆಲ್ಲಾ ನೆನಪಿರಲಿ ಎಂದು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ ಗೆಳೆಯ ಜಿ.ಟಿ.ದೇವೇಗೌಡರು ಇತ್ತೀಚೆಗೆ ನನ್ನ ವಿರುದ್ಧ ಮಾತನಾಡಿಲ್ಲ ನಿಜ. ಆದರೆ ಮೈಸೂರಲ್ಲಿ ಜೆಡಿಎಸ್ ನವರು ಬಿಜೆಪಿಗೆ ಮತ ಹಾಕಿದ್ದಾರೆಂಬ ಅವರ ಹೇಳಿಕೆ ಸತ್ಯವಾಗಿದ್ದರೂ ಅನಗತ್ಯವಾಗಿತ್ತು. ಇದರಿಂದಾಗಿ ಕೆರಳಿದ ನಮ್ಮ ಕಾರ್ಯಕರ್ತರು ಜೆಡಿಎಸ್ ವಿರುದ್ಧ ಮಾತನಾಡತೊಡಗಿದ್ದರು. ಮೈತ್ರಿಕೂಟದಲ್ಲಿ ಇಂತಹದನ್ನು ಮಾಡಬಾರದು ಎಂದು ಬರೆದಿದ್ದಾರೆ.

LEAVE A REPLY

Please enter your comment!
Please enter your name here