ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯಗೆ ಕುಮಾರಸ್ವಾಮಿ ನೀಡರುವ ಬಂಪರ್ ಆಫರ್ ಏನು ಗೊತ್ತೇ?

0
4583

ನ್ಯೂಸ್ ಕನ್ನಡ ವರದಿ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದೆ ಕಾರು ಮತ್ತೆ ಮನೆ ವಿಚಾರದಲ್ಲಿ ಬಂಪರ್ ಆಫರ್ ಬಂದಿದ್ದು, ಈಗ ಮೈತ್ರಿ ಸರ್ಕಾರದಲ್ಲಿಯೂ ಕೂಡ ಸ್ಥಾನಮಾನ ಒಲಿದು ಬಂದಿದೆ. ಸ್ವತಃ ಕುಮಾರಸ್ವಾಮಿ ಅವರೇ ಸಿದ್ದರಾಮಯ್ಯರವರಿಗೆ ಮೈತ್ರಿ ಸರ್ಕಾರದಲ್ಲಿ ಸ್ಥಾನಮಾನ ನೀಡುವ ಸಲುವಾಗಿ ಕ್ಯಾಬಿನೆಟ್ ದರ್ಜೆ ಸ್ಥಾನಮಾನವನ್ನು ನೀಡಲಿದ್ದಾರೆಂದು ಹೇಳಲಾಗುತ್ತಿದೆ.

ಸಮಸ್ವಯ ಸಮಿತಿಯನ್ನು ಮೈತ್ರಿ ಸರ್ಕಾರಕ್ಕೆ ಸಲಹೆ ಕೊಡಲು ರಚನೆ ಮಾಡಲಾಗುತ್ತಿದೆ. ಆದ್ದರಿಂದ ಈ ಸಮನ್ವಯ ಸಮಿತಿ ರಚಿಸಿ ಆದೇಶ ಹೊರಡಿಸಲು ಸರ್ಕಾರಕ್ಕೆ ಅಧಿಕಾರವಿದೆ. ಸರ್ಕಾರದಿಂದಲೇ ಸಮನ್ವಯ ಸಮಿತಿ ರಚಿಸಿ ಅಧಿಕೃತ ಆದೇಶ ಹೊರಡಿಸಲಿದ್ದಾರೆ. ಆದ್ದರಿಂದ ಸಮನ್ವಯ ಸಮಿತಿ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸೋಮವಾರ ಸಂಜೆಯೊಳಗೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here