ಶಿವಸೇನೆಯವರಿಂದ ಹಲ್ಲೆಗೊಳಗಾದ ಮಾಜಿ ನೌಕಾದಳ ಅಧಿಕಾರ ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆ!

0
28

ನ್ಯೂಸ್ ಕನ್ನಡ ವರದಿ: ಕೆಲವೇ ದಿನಗಳ ಹಿಂದೆ ಮುಂಬೈನಲ್ಲಿ ಕಾರ್ಟೂನ್ ವಿಚಾರದಲ್ಲಿ ಶಿವಸೇನೆ ಸದಸ್ಯರಿಂದ ಹಲ್ಲೆಗೊಳಗಾಗಿದ್ದ ನಿವೃತ್ತ ನೌಕಾದಳ ಅಧಿಕಾರಿ ಮದನ್ ಶರ್ಮ ತಾವು ಬಿಜೆಪಿ, ಆರಸ್ಸೆಸ್ ಸೇರಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಎಲ್ಲರಿಗೂ ತಿಳಿಸವುದೇನೆಂದರೆ ನಾನೀಗ ಬಿಜೆಪಿ ಮತ್ತು ಆರೆಸ್ಸೆಸ್ ಸೇರಿದ್ದೇನೆ. ಮಹಾರಾಷ್ಟ್ರದಲ್ಲಿ ಯಾವುದೇ ಗೂಂಡಾಗಿರಿ ನಡೆಯಲು ಬಿಡುವುದಿಲ್ಲ, ಮಹಾರಾಷ್ಟ್ರದಲ್ಲಿನ ‘ಗೂಂಡಾಗಿರಿ’ ನಿಲ್ಲಿಸುತ್ತೇವೆ ಎಂದು ನಿವೃತ್ತ ನೌಕಾದಳದ ಅಧಿಕಾರಿ ತಿಳಿಸಿದ್ದಾರೆ.

ಅಲ್ಲದೇ ಅವರು ಇಂದು ರಾಜ್ಯಪಾಲ ಬಿ ಎಸ್ ಕೊಶ್ಯಾರಿ ಅವರನ್ನು ಭೇಟಿಯಾದ ಶರ್ಮ ತಾವು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ವಿನಂತಿಸಿದ್ದಾಗಿ ಹೇಳಿದರಲ್ಲದೆ ಈ ಕುರಿತು ಕೇಂದ್ರದ ಬಳಿ ಮಾತನಾಡುವ ಭರವಸೆಯನ್ನು ರಾಜ್ಯಪಾಲರು ನೀಡಿದ್ದಾರೆ, ಹಲ್ಲೆ ಪ್ರಕರಣದ ಆರೋಪಿಗಳ ವಿರುದ್ಧ ದುರ್ಬಲ ಸೆಕ್ಷನ್‍ಗಳನ್ವಯ ಪ್ರಕರಣ ದಾಖಲಿಸಲಾಗಿರುವ ಕುರಿತು ರಾಜ್ಯಪಾಲರಲ್ಲಿ ತಿಳಿಸಿದ್ದೇನೆ,’ ಎಂದರು.

LEAVE A REPLY

Please enter your comment!
Please enter your name here