“ಕೇರಳ ದೇಶದ ಮತ್ತೊಂದು ಕಾಶ್ಮೀರ ಆಗಲು ಹೊರಟಿದೆ’ ಹೇಳಿಕೆ: ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲು

0
52

ನ್ಯೂಸ್ ಕನ್ನಡ ವರದಿ: ಕೇರಳ ದೇಶದ ಮತ್ತೊಂದು ಕಾಶ್ಮೀರ ಆಗಲು ಹೊರಟಿದೆ ಎಂಬ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ವಿರುದ್ಧ ಕೆರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ ಅವರು ಟ್ವೀಟರ್ ನಲ್ಲಿ, ಕೇರಳ ದೇಶದ ಮತ್ತೊಂದು ಕಾಶ್ಮೀರ ಆಗಲು ಹೊರಟಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿದ ಮಲ್ಲಪ್ಪುರಂ ಕುಟ್ಟಿಪುರಂ ಪಂಚಾಯತ್ ನ ಹಿಂದುಗಳಿಗೆ ನೀರು ಸರಬರಾಜು ನಿರಾಕರಿಸಲಾಗಿದೆ. ಈ ಪ್ರದೇಶದಲ್ಲಿ ಸೇವಾ ಭಾರತಿ ನೀರು ಸರಬರಾಜು ಮಾಡುತ್ತಿದೆ ಎಂದು ಹೇಳಿದ್ದರು.

ಶೋಭಾ ಕರಂದ್ಲಾಜೆ ಅವರ ಈ ಟ್ವೀಟ್ ಆಧರಿಸಿ ಕೇರಳ ಪೊಲೀಸರು ಕರಂದ್ಲಾಜೆ ವಿರುದ್ಧ ಐಪಿಸಿ ಸೆಕ್ಷನ್ 153 ಎ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here