ತುಲಾಭಾರದ ಸಮಯದಲ್ಲಿ ಶಶಿ ತರೂರ್ ತಲೆಗೆ ಏಟು; ನೋವಿನಲ್ಲೂ ಹಾಸ್ಯ ಪ್ರವೃತ್ತಿ ಮೆರೆದ ಸಂಸದ!

0
133

ನ್ಯೂಸ್ ಕನ್ನಡ ವರದಿ (17-4-2019) ತಿರುವನಂತಪುರಂ: ದೇವಾಲಯದಲ್ಲಿ ತುಲಾಭಾರ ಸೇವೆ ಮಾಡುವ ಸಂಧರ್ಭದಲ್ಲಿ ತಕ್ಕಡಿ ತುಂಡಾಗಿ ತಲೆಗೆ ಪೆಟ್ಟು ಮಾಡಿಕೊಂಡು ಶಶಿ ತರೂರ್ ಅವರು ತಿರುವನಂತಪುರಂನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ರಾಜಕೀಯ ಪ್ರಚಾರ ವೇಳೆಯೇ ಶಶಿ ತರೂರ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಫೋಟೋ ಪೋಸ್ಟ್ ಮಾಡಿರುವ ಶಶಿ ತರೂರ್, ನಿರ್ಮಲಾ ಅವರ ಸೌಜನ್ಯಕ್ಕೆ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.

ತುಲಾಭಾರ ಸೇವೆ ವೇಳೆ ನಡೆದ ಅವಘಡದಲ್ಲಿ ಗಾಯಗೊಂಡಿದ್ದಕ್ಕೆ ಶಶಿ ತರೂರ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಕೆಲ ಮಂದಿ ಕಾಲೆಳೆದಿದ್ದರು. ತುಲಾಭಾರ ಮಾಡುವ ವೇಳೆ ಹೆಲ್ಮೆಟ್ ಧರಿಸುವಂತೆ ಫೋಟೋ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದರು. ಈ ಫೋಟೊವನ್ನು ಶೇರ್ ಮಾಡಿರುವ ಶಶಿ ತರೂರ್ ನನ್ನ ಕುಟುಂಬ ಕೂಡ ಮುಂದಿನ ಬಾರಿ ಇದನ್ನೇ ಬಯಸುತ್ತಿದೆ ಎಂದು ಟ್ವೀಟ್‍ ಮಾಡಿ, ಕಾಲೆಳೆಯವರ ಜೊತೆ ಲಘು ಹಾಸ್ಯ ಮಾಡಿದ್ದಾರೆ.

 

LEAVE A REPLY

Please enter your comment!
Please enter your name here