ಶೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ: ಅಮೆರಿಕಕ್ಕೂ ಹಣದುಬ್ಬರದ ಬರೆ!

0
291

ನ್ಯೂಸ್ ಕನ್ನಡ ವರದಿ: (11.10.18) ಅಮೇರಿಕದ ವಾಲ್​ಸ್ಟ್ರೀಟ್​ ಕಳೆದ ಎಂಟು ತಿಂಗಳಲ್ಲೇ ಅತ್ಯಂತ ಕುಸಿತವಾಗಿದ್ದು, ಪರಿಣಾಮ ಜಾಗತಿಕ ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲವಾಗಿದೆ. ಅಮೆರಿಕಾದ ಹಣದುಬ್ಬರದ ಏರಿಕೆಯೇ ವಾಲ್​ಸ್ಟ್ರೀಟ್​ ಅನ್ನು ನಲುಗಿಸಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಆರ್ಥಿಕತೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಹಣದುಬ್ಬರದ ವಿಚಾರದಲ್ಲಿ ಒಂದಷ್ಟು ಮಾರ್ಪಾಟುಗಳನ್ನು ಮಾಡಲಾಗಿದೆ ಎಂದು ವೈಟ್​ ಹೌಸ್ ಮೂಲಗಳು ತಿಳಿಸಿವೆ.

ಈ ಕುಸಿತ ಹೂಡಿಕೆದಾರರನ್ನು ಕಂಗಾಲು ಮಾಡಿದೆ. ಅನಿರೀಕ್ಷಿತ ಬದಲಾವಣೆಗೆ ಷೇರುದಾರರು ನಿಬ್ಬೆರಗಾಗಿದ್ದಾರೆ. ಷೇರು ಮಾರುಕಟ್ಟೆಯ ಮೇಲೆ ಹಿಡಿತ ಹೊಂದಿರುವ ಅಮೆರಿಕ, ತನ್ನ ಹಣದುಬ್ಬರ ಅಂಕಿಅಂಶಗಳನ್ನು ಹೆಚ್ಚಳ ಮಾಡಿದ್ದು ಷೇರು ಮಾರುಕಟ್ಟೆಯ ಮೇಲೆ ನೇರವಾಗಿ ಪರಿಣಾಮ ಬೀರಿದೆ. ಚೀನಾದ ಕರೆನ್ಸಿ ಯುವಾನ್​ ಸಹ ತನ್ನ ಮೌಲ್ಯ ಕಳೆದುಕೊಂಡಿದೆ. ಶಾಂಘೈನ ಷೇರುಗಳು 2014 ಬಳಿಕ ತೀವ್ರವಾಗಿ ಕುಸಿತವಾಗಿದೆ. ಜಪಾನ್​ನ ಕೆಲ ಷೇರುಗಳು ಮಾರ್ಚ್​ ತಿಂಗಳ ಬಳಿಕ ಅತಿದೊಡ್ಡ ಇಳಿಕೆಯನ್ನು ಕಂಡಿದೆ.

LEAVE A REPLY

Please enter your comment!
Please enter your name here