ಷೇರು ಮಾರುಕಟ್ಟೆಯಲ್ಲಿ ಮಹಾ ಕುಸಿತ: 45 ನಿಮಿಷಗಳ ಕಾಲ ವ್ಯವಹಾರವೇ ಸ್ಥಗಿತ

0
95

ನ್ಯೂಸ್ ಕನ್ನಡ ವರದಿ: ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಮುಂದುವರೆದಿದೆ. ಇಂದು ಸೆನ್ಸೆಕ್ಸ್‌ 3000 ಪಾಯಿಂಟ್‌ ಗಳಷ್ಟು ಕುಸಿದಿದ್ದು, ಮತ್ತಷ್ಟು ಪಾತಾಳಕ್ಕಿಳಿಯುವುದನ್ನು ತಪ್ಪಿಸಲು 45 ನಿಮಿಷಗಳ ಕಾಲ ವ್ಯವಹಾರವನ್ನೇ ಸ್ಥಗಿತಗೊಳಿಸಲಾಗಿದೆ.

ಷೇರು ಮಾರುಟ್ಟೆಯಲ್ಲಿನ ಈ ಬೆಳವಣಿಗೆಯಿಂದ ಹೂಡಿಕೆದಾರರು ಕಂಗಾಲಾಗಿದ್ದು, ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಕರೋನಾ ವೈರಸ್‌ ಹೆಮ್ಮಾರಿಯ ಪ್ರಭಾವ ಷೇರು ಮಾರುಕಟ್ಟೆ ಮೇಲಾಗಿರುವುದೇ ಇದಕ್ಕೆ ಕಾರಣವೆಂದು ಹೇಳಲಾಗಿದೆ.

ಈ ಹಿಂದೆ 2008 ರ ಮೇನಲ್ಲಿ ಇದೇ ತೆರನಾದ ಮಹಾ ಕುಸಿತ ಷೇರು ಮಾರುಕಟ್ಟೆಯಲ್ಲಿ ಸಂಭವಿಸಿದ್ದು, ಇದೀಗ ಅದು ಮತ್ತೆ ಮರುಕಳಿಸಿದೆ.

LEAVE A REPLY

Please enter your comment!
Please enter your name here