ತಮ್ಮ ಆತ್ಮಚರಿತ್ರೆಯಲ್ಲಿ ಹಲವಾರು ರಹಸ್ಯ ಮಾಹಿತಿಗಳನ್ನು ಬಹರಂಗಪಡಿಸಿದ ಶೇನ್ ವಾರ್ನ್!

0
214

ನ್ಯೂಸ್ ಕನ್ನಡ ವರದಿ : ವಿಶ್ವ ಕಿಕ್ರೆಟ್​ನ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್​ ತಮ್ಮ ಜೀವನ ಚರಿತ್ರೆಯನ್ನು ಪುಸ್ತಕದ ಮೂಲಕ ದಾಖಲಿಸಿದ್ದು, ನೋ ಸ್ಪಿನ್ ಎನ್ನುವ ಹೆಸರನ್ನಿಟ್ಟಿದ್ದಾರೆ. ತಮ್ಮ ಅನುಭವ ಹಾಗೂ ಅನಿಸಿಕೆಗಳನ್ನು ಈ ಪುಸ್ತಕದ ಮೂಲಕ ಹಂಚಿಕೊಂಡಿರುವ ವಾರ್ನ್​ ಕ್ರಿಕೆಟ್​ ಲೋಕದ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಲಂಚದ ಆಮಿಷದಿಂದ ಹಿಡಿದು ವಾರ್ನ್ ಖಾಸಗಿ ವಿಚಾರಗಳೂ ಅಕ್ಷರ ರೂಪ ಪಡೆದಿವೆ. ಯಾವುದೇ ರಾಜಿಯಿಲ್ಲದೆ ಎಲ್ಲವನ್ನೂ ಬರೆದಿದ್ದೇನೆ ಎಂದು ವಾರ್ನ್​ ಹೇಳಿದ್ದಾರೆ.

ತಮ್ಮ ಬದುಕಿನ ಪ್ರತಿ ಕ್ಷಣದ ಅನುಭವ ಹಂಚಿಕೊಂಡಿರುವ ಇವರು ತಮ್ಮ ವೃತ್ತಿಯಲ್ಲಿ ಆದ ಪ್ರತ್ಯೇಕ ವಿಷಯವನ್ನು ನಿರರ್ಗಳರಾಗಿ ಬರೆದಿದ್ದಾರೆ. ಇವುಗಳಲ್ಲಿ ಕೆಲವೊಂದು ವಿಷಯಗಳು ಇಂತಿವೆ. 1994-95 ರ ಆಸೀಸ್ ಹಾಗೂ ಪಾಕಿಸ್ತಾನ ನಡುವಿನ ಟೆಸ್ಟ್ ಪಂದ್ಯದಲ್ಲಿ ಪಾಕ್ ಬೌಲರ್​ ಸಲೀಮ್ ಮಲಿಕ್ ಎರಡು ಲಕ್ಷ ಡಾಲರ್​ ಹಣದ ಆಮಿಷ ಒಡ್ಡಿದ್ದಾಗಿ ಹೇಳಿದ್ದಾರೆ. ತನ್ನ ರೂಮಿನಲ್ಲಿ ಹಣ ಇದೆ, ನಾನು ಆಫ್​ ಸ್ಟಂಪ್ ಬದಿಯಿಂದ ವೈಡ್ ಎಸೆದರೆ ಪಂದ್ಯ ಡ್ರಾ ಎನ್ನುವ ರಹಸ್ಯ ಸಂಜ್ಞೆಯನ್ನು ಮಾಡಿದ್ದರು ಎಂದು ವಾರ್ನ್​ ನೋ ಸ್ಪಿನ್​ನಲ್ಲಿ ಬರೆದಿದ್ದಾರೆ.

ಇನ್ನು ತಮ್ಮ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಶೇನ್ ವಾರ್ನ್​ ಕ್ರಿಕೆಟ್ ಅಂಗಣಕ್ಕಿಂತ ಹೊರಗಿನ ವಿಚಾರದಲ್ಲಿ ಹೆಚ್ಚು ಸುದ್ದಿಯಾಗಿದ್ದರು. ಹಲವು ಮಹಿಳೆಯರೊಂದಿಗೆ ಆಸೀಸ್​ ಸ್ಪಿನ್ನರ್ ಹೆಸರು ಕೇಳಿ ಬಂದಿತ್ತು. ಮದುವೆಗಳು ಹೆಚ್ಚು ಕಾಲ ಉಳಿಯಲಿಲ್ಲ. ಈ ವಿಚಾರದಲ್ಲಿ ನಾನು ಸಂಪೂರ್ಣ ಸೋತಿದ್ದೇನೆ ಎಂದು ವಾರ್ನ್​ ಹೇಳಿದ್ದಾರೆ. ನನ್ನ ಬದುಕಿನಲ್ಲಿ ಇಬ್ಬರು ಮಹಿಳೆಯರೊಂದಿಗೆ ಮಾತ್ರ ಉತ್ತಮ ಸಂಬಂಧ ಹೊಂದಿದ್ದೆ. ಆದರೆ ಎರಡೂ ಸಂಬಂಧಗಳು ಹೆಚ್ಚು ಕಾಲ ಉಳಿಯಲಿಲ್ಲ. ಆದರೆ ಇಬ್ಬರೂ ಸದ್ಯ ನನ್ನ ಒಳ್ಳೆಯ ಸ್ನೇಹಿತೆಯರು ಎಂದು ವಾರ್ನ್​ ಬರೆದುಕೊಂಡಿದ್ದಾರೆ. ವಾರ್ನ್ ನವರ ಈ ಹೊಸ ಪುಸ್ತಕದಿಂದ ನಮಗೆ ಒಬ್ಬ ದಿಗ್ಗಜ ವ್ಯಕ್ತಿಯ ಹಲವು ಒಳ ಮನಸ್ಸುಗಳನ್ನು ಅಥ೯ ಮಾಡಿಕೊಳ್ಳುವ ಸಂದಭ೯ ಒದಗಿದೆ.

LEAVE A REPLY

Please enter your comment!
Please enter your name here