ಈಡನ್ ಗಾರ್ಡನ್ಸ್ ನಲ್ಲಿ ಶಾರೂಖ್ ನೊಂದಿಗೆ ಕೆಕೆಆರ್ ಆಟಗಾರರನ್ನು ಹುರಿದುಂಬಿಸಿದ ಮಗಳು ಸುಹಾನ!

0
17

ನ್ಯೂಸ್ ಕನ್ನಡ ವರದಿ(08-04-2018): ನಿನ್ನೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯಾಟದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರರನ್ನು ಹುರಿದುಂಬಿಸಲು ತಂದೆ ಶಾರೂಖ್ ಖಾನ್ ನೊಂದಿಗೆ ಮಗಳು ಸುಹಾನಾ ಸೇರಿಕೊಂಡಿರುವುದು ಪಂದ್ಯದ ವಿಶೇಷತೆಯಾಗಿತ್ತು.

ತನ್ನ ಪ್ರಥಮ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ತಂದೆ ಮಗಳ ಪ್ರೋತ್ಸಾಹದಿಂದಾಗಿ ಹೆಚ್ಚಿನ ಬಲ ಬಂದಂತಾಗಿತ್ತು. ಶಾರೂಖ್ ಹಾಗೂ ಸುಹಾನಾರ ನಿರೀಕ್ಷೆಯನ್ನು ಹುಸಿಯಾಗಿಸದ ಕೆಕೆಆರ್ ತಂಡವು ಪಂದ್ಯವನ್ನು ಬಹಳ ರೋಮಾಂಚಕಾರಿಯಾಗಿ ಗೆದ್ದುಕೊಂಡಿತು.

ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡವು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿದರೆ, ಗುರಿಯನ್ನು ಬೆನ್ನತ್ತಿದ ಕೆಕೆಆರ್ ತಂಡವು ಸುನಿಲ್ ನರೈನ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದಾಗಿ 18.5 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಜಯಗಳಿಸಿತು.

LEAVE A REPLY

Please enter your comment!
Please enter your name here