ಮೋದಿವರೇ ದೇಶದ ರಾಜಧಾನಿಯನ್ನೇ ಲಂಡನ್ ಅಥವಾ ನ್ಯೂಯಾರ್ಕಿಗೆ ಸ್ಥಳಾಂತರಿಸಿ: ಉದ್ಭವ್ ಠಾಕ್ರೆ!

0
781

ನ್ಯೂಸ್ ಕನ್ನಡ ವರದಿ(21-04-2018): ಪ್ರಧಾನಿ ಮೋದಿಯವರು ಅತ್ಯಾಚಾರದಂತಹ ಆಂತರಿಕ ವಿಷಯಗಳನ್ನು ವಿದೇಶಗಳಿಗೆ ಹೋಗಿ ಪ್ರಸ್ತಾಪಿಸುತ್ತಾರೆ. ಅದಕ್ಕಿಂತ ದೇಶದ ರಾಜಧಾನಿಯನ್ನೇ ದೆಹಲಿಯಿಂದ ಬದಲಾಯಿಸಿ ಲಂಡನ್ ಅಥವಾ ನ್ಯೂಯಾರ್ಕಿಗೆ ಸ್ಥಳಾಂತರಿಸಿ ಎಂದು ಶಿವಸೇನೆ ಪ್ರಧಾನಿಯವರನ್ನು ವ್ಯಂಗ್ಯವಾಡಿದೆ.

ಪ್ರಧಾನಿಯವರು ದೇಶದೊಳಗೆ ‘ಮೌನಿ ಬಾಬಾ’ ನಂತಿರುತ್ತಾರೆ, ಆದರೆ ವಿದೇಶಗಳಿಗೆ ಹೋದ ತಕ್ಷಣ ಮಾತನಾಡಲು ತೊಡಗುತ್ತಾರೆ. ನಮ್ಮ ದೇಶದಲ್ಲಿಯೇ ಪರಿಹಾರ ಕಂಡು ಹುಡುಕಬೇಕಾದ ಅತ್ಯಾಚಾರದಂತಹ ವಿಷಯಗಳನ್ನು ವಿದೇಶದಲ್ಲಿ ಪ್ರಸ್ತಾಪ ಮಾಡುವ ಮೂಲಕ ದೇಶಕ್ಕೆ ಅವಮಾನ ಮಾಡುತ್ತಿದ್ದಾರೆ. ಇನ್ನು ದೇಶದ ರಾಜಧಾನಿಯನ್ನೇ ಲಂಡನ್ ಅಥವಾ ನ್ಯೂಯಾರ್ಕಿಗೆ ಸ್ಥಳಾಂತರಿಸಿ ಬಿಡಿ ಎಂದು ಸಾಮ್ನಾದ ಸಂಪಾದಕೀಯದಲ್ಲಿ ಶಿವಸೇನೆ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದೆ.

ನಮ್ಮ ಆಂತರಿಕ ವಿಚಾರಗಳನ್ನು ವಿದೇಶದಲ್ಲಿ ಪ್ರಸ್ತಾಪಿಸುವುದು ಪ್ರಧಾನಿಯ ಕೆಲಸವೇ?. ಅತ್ಯಾಚಾರ ಹಾಗೂ ಭೃಷ್ಟಾಚಾರದಂತಹ ನಮ್ಮ ಆಂತರಿಕ ವಿಷಯಗಳನ್ನು ಅಲ್ಲಿ ಹೋಗಿ ಹೇಳುವುದು ಇವರಿಗೆ ಹೇಳಿದ ಕೆಲಸವೇ?. ಇಂತಹ ಸತ್ಯವನ್ನು ಹೇಳಿದರೆ ಭಕ್ತರಿಗೆ ನಂಬಿಕೆ ಬರುವುದಿಲ್ಲ ಎಂದರು.

LEAVE A REPLY

Please enter your comment!
Please enter your name here