ವಿರಾಟ್ ಕೊಹ್ಲಿ ಬಳಿಕ ಭಾರತ ತಂಡವನ್ನು ಬೌಲರ್ ಓರ್ವ ಮುನ್ನಡೆಸಬೇಕು: ವಿರೇಂದ್ರ ಸೆಹ್ವಾಗ್

0
499

ನ್ಯೂಸ್ ಕನ್ನಡ ವರದಿ(07-04-2018): ಟೀಮ್ ಇಂಡಿಯಾದ ಈಗಿನ ನಾಯಕ ವಿರಾಟ್ ಕೊಹ್ಲಿಯ ನಂತರ ಬೌಲರನೋರ್ವ ಭಾರತ ತಂಡದ ಕಪ್ತಾನನಾಗಬೇಕೆಂದು ಭಾರತ ತಂಡದ ಮಾಜಿ ಆಟಗಾರ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮಾರ್ಗದರ್ಶಿ ವೀರೆಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ನಾನು ಕಪಿಲ್ ದೇವ್, ಇಮ್ರಾನ್ ಖಾನ್, ವಾಸೀಂ ಅಕ್ರಂ ಅವರ ನಾಯಕತ್ವವನ್ನು ನೋಡಿದ್ದೇನೆ. ಇತ್ತೀಚೆಗೆ ಯಾವ ಒಬ್ಬ ಬೌಲರ್ ಸಹ ತಂಡದ ನಾಯಕನಾಗಿಲ್ಲ. ವಿರಾಟ್ ಕೊಹ್ಲಿ ನಂತರ ಬೌಲರ್ ಒಬ್ಬರಿಗೆ ನಾಯಕತ್ವ ಸಿಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಶ್ವಿನ್ ರನ್ನು ಪಂಜಾಬ್ ತಂಡದ ನಾಯಕನನ್ನಾಗಿ ಮಾಡಿರುವುದು ಉತ್ತಮ ನಿರ್ಧಾರ. ನಾನು ಅಶ್ವಿನ್ ಅವರ ಅಭಿಮಾನಿ. ಕಳೆದ ಆವೃತಿಯ ಐಪಿಎಲ್ ಗೆ ಹೋಲಿಸಿದರೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಬಲಿಷ್ಠವಾಗಿದ್ದು, ಈ ಬಾರಿಯ ಐಪಿಎಲ್ ಚಾಂಪಿಯನ್ ಆಗುವ ವಿಶ್ವಾಸವಿದೆ ಎಂದರು.

LEAVE A REPLY

Please enter your comment!
Please enter your name here