ನಿಖಿಲ್ ಕುಮಾರಸ್ವಾಮಿ ಅಭಿನಯದ ಚಿತ್ರ ರೈತರಿಗೆ ಆದರ್ಶವಾಗುತ್ತದೆ: ಬಿಜೆಪಿ ನಾಯಕ ಕೆ.ಎಸ್​ ಈಶ್ವರಪ್ಪ

0
340

ನ್ಯೂಸ್ ಕನ್ನಡ ವರದಿ (25-1-2019): ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ ಕುಮಾರ್​ ಅವರ ಅಭಿನಯದ ‘ಸೀತಾರಾಮ ಕಲ್ಯಾಣ’ ಚಿತ್ರವನ್ನು ಬಿಡುಗಡೆಯ ಮುನ್ನಾ ದಿನ ಬೆಂಗಳೂರಿನ ಒರಯಾನ್ ಮಾಲ್​ನಲ್ಲಿ ಗಣ್ಯರಿಗಾಗಿ ಪ್ರೀಮಿಯರ್​ ಶೋನಲ್ಲಿ ವಿಶೇಷವಾಗಿ ಪ್ರದರ್ಶಿಸಲಾಯಿತು.

ರಾಜ್ಯದ ಹಲವು ನಾಯಕರು ರಾಜಕೀಯ ವೈಷಮ್ಯ ಮರೆತು ಚಿತ್ರ ವೀಕ್ಷಣೆಗೆ ಆಗಮಿಸಿದ್ದರು. ಬಿಜೆಪಿಯ ನಾಯಕ ಕೆ.ಎಸ್​ ಈಶ್ವರಪ್ಪ ಅವರೂ ಶೋನಲ್ಲಿ ಚಿತ್ರ ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಪುತ್ರನ ಅಭಿನಯಕ್ಕೆ ಮೆಚ್ಚುಗೆ ಪಟ್ಟರು. “‘ಸೀತಾರಾಮ ಕಲ್ಯಾಣ’ ನಿಖಿಲ್ ಕುಮಾರ್​ ಪ್ರತಿಭೆಯನ್ನು ಹೊರತಂದಿದೆ. ಸಿನಿಮಾದಲ್ಲಿ ಮನೋರಂಜನೆ ಇದೆ. ಹಾಗೆಯೇ ರೈತರಿಗೆ ಆದರ್ಶವಾಗಿದೆ. ಖಂಡಿತ ಈ ಸಿನಿಮಾ ಜನರಿಗೆ ಆದರ್ಶವಾಗುತ್ತೆ ಎಂದು ಹೇಳಲು ಬಯಸುತ್ತೇನೆ,” ಎಂದರು. ಇದೇ ಶೋನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಪರಮೇಶ್ವರ್​, ಸಚಿವ ಜಮೀರ್​ ಸೇರಿದಂತೆ ಹಲವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here