ಎರಡನೇ ವಿವಾಹಕ್ಕೆ ಮಕ್ಕಳಿಂದ ಅಡ್ಡಿ; 75ರ ವಯೋವೃದ್ಧ ಮಾಡಿದ್ದೇನು ಗೊತ್ತೇ?

0
1112

ನ್ಯೂಸ್ ಕನ್ನಡ ವರದಿ (18-8-2019): ಉತ್ತರ ಪ್ರದೇಶದ ಬರೈಲಿಯಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಎರಡನೇ ಮದುವೆಯಾಗಲು ಮಕ್ಕಳಿಂದ ಅಡ್ಡಿಯಾದ್ದರಿಂದ ಮನನೊಂದು 75 ನೇ ವರ್ಷದ ವಯೋವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾನ್ಷಿರಾಮ್ ಕಾಲೋನಿಯ ನಿವಾಸಿ ಅರ್ಷದ್ ಆತ್ಮಹತ್ಯೆ ಮಾಡಿಕೊಂಡ ವಯೋವೃದ್ಧ. ಇವರ ಹೆಂಡತಿ ಮೃತಪಟ್ಟಿದ್ದರಿಂದ ಎರಡನೇ ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಮಕ್ಕಳು ತಡೆಗೋಡೆಯಾದ್ದರಿಂದ,ವಿದ್ಯುತ್ ಪಂಕಕ್ಕೆ (ಫ್ಯಾನ್) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಂದೆಯ ಎರಡನೇ ವಿವಾಹದ ವಿಷಯ ತಿಳಿದ ಮಕ್ಕಳು, ಈ ಮದುವೆಯಿಂದಾಗಿ ಕುಟುಂಬದ ಮಾನ ಹೋಗುತ್ತದೆ ಎಂದು ಗುರುವಾರ ಜಗಳವಾಡಿದ್ದಾರೆ. ಮರುದಿವಸ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮೃತಪಟ್ಟ ಅರ್ಷದ್ ಅವರಿಗೆ ಐವರು ಮಕ್ಕಳು ಹಾಗೂ ಮೂವರು ಹೆಣ್ಣುಮಕ್ಕಳಿದ್ದಾರೆ. ಅರ್ಷದ್ ಆತ್ಮಹತ್ಯೆ ಮಾಡಿಕೊಂಡಿರುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here