ಸೌದಿ ಅರೆಬಿಯಾ ಖಮೀಶ್ ಮುಷಾಯತ್ ನಲ್ಲಿ ಮೃತಪಟ್ಟ ವ್ಯಕ್ತಿಯ ಧಫನ ಕಾರ್ಯ ನಿರ್ವಹಿಸಿದ ಇಂಡಿಯನ್ ಸೋಶಿಯಲ್ ಫೋರಮ್

0
148

ನ್ಯೂಸ್ ಕನ್ನಡ ವರದಿ ಸೌದಿ ಅರೇಬಿಯಾ: ದಿನಾಂಕ (08/03/2020)ರಂದು ಸೌದಿ ಅರೇಬಿಯಾದ ಅಶೀರ್ ಪ್ರಾಂತ್ಯದ ಖಮೀಶ್ ಮುಷಾಯತ್ ಬಳಿಯ ಖಾಲಿದೀಯ ಎಂಬಲ್ಲಿ ಫುಟ್ಬಾತ್ ಬಳಿ ತನ್ನ ಸಹೋದರ ಸಮದ್ ಅಲಿ ಜೊತೆ ನಿಂತಿದ್ದಾಗ ಚಾಲಕನ ನಿರ್ಲಕ್ಷ್ಯದಿಂದ ಹಠಾತ್ತನೆ ಬಂದ ಕಾರು ಗುದ್ದಿದ ಪರಿಣಾಮ ಉತ್ತರ ಪ್ರದೇಶದ ಗಾಝಿಯಾಬಾದ್ ನಿವಾಸಿ ಸಲ್ಮಾನ್ ಅಲಿ ನಿಧನ ಹೊಂದಿದ್ದರು.

ಮೃತದೇಹದ ಧಫನ ಕಾರ್ಯವನ್ನು ನೆರವೇರಿಸುವ ನಿಟ್ಟಿನಲ್ಲಿ ಸಲ್ಮಾನ್ ಅಲಿಯವರ ಸೌದಿ ಅರೇಬಿಯಾದ ಪ್ರಾಯೋಜಕ ಸೌದಿ ಪ್ರಜೆಯ ಸಹಾಯದಿಂದ ಕಡತಗಳನ್ನು ಸರಿಪಡಿಸುವಲ್ಲಿ ಮೃತರ ಸಹೋದರನಾದ ಶಮದ್ ಅಲಿ ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ಕಮೀಸ್ ಮುಶಾಯ್ತ್ ಘಟಕದ ಅಧ್ಯಕ್ಷರೂ ಮತ್ತು ಭಾರತೀಯ ರಾಯಭಾರಿ ಕಚೇರಿ ಜೆದ್ದ ಇದರ ಸಿ ಡಬ್ಲ್ಯೂ ಸಿ ಸದಸ್ಯರೂ ಆಗಿರುವ ಹನೀಫ್ ಮಂಜೇಶ್ವರವರನ್ನು ಸಹಾಯಕ್ಕಾಗಿ ಮನವಿ ಮಾಡಿದ್ದರು

ಇವರ ಮನವಿಗೆ ಸ್ಪಂದಿಸಿದ ಹನೀಫ್ ಮಂಜೇಶ್ವರ ನೇತೃತ್ವದ ತಂಡ ಮೃತದೇಹ ದಫನ ಕಾರ್ಯದ ಪ್ರಕ್ರಿಯೆ ನಡೆಸಲು ಕಾರ್ಯಪ್ರವೃತ್ತರಾಯಿತು. ಇವರ ಸತತ ಪ್ರಯತ್ನದಲ್ಲಿ, ಸೌದಿ ಅರೇಬಿಯಾ ದ ಕಾನೂನಿನಂತೆ ದಫನಕ್ಕಾಗಿ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಸೌದಿ ಅರೇಬಿಯಾ ದ ಕಾನೂನಿನಂತೆ ದಫನಕ್ಕಾಗಿ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿದರು. ಅಪಘಾತದ ಮರಣವಾದ ಕಾರಣ ಮೃತನ ಕುಟುಂಬಕ್ಕೆ ಬೇಕಾದ ಪರಿಹಾರ ಧನದ ಬಗ್ಗೆ ಸೌದಿ ಪ್ರಜೆಯೊಂದಿಗಿನ ಯಶಸ್ವಿ ಮಾತುಕತೆಯಲ್ಲಿ ಇಂಡಿಯನ್ ಸೋಷಿಯಲ್ ಫಾರಂ 75000 ಸೌದಿ ರಿಯಾಲ್ (ಸುಮಾರು 15 ಲಕ್ಷ ರುಪಾಯಿ) ಹಣವನ್ನು ಮೃತರ ಕುಟುಂಬಕ್ಕೆ ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.

ದಿನಾಂಕ 03/05/2020 ರವಿವಾರ ಲುಹರ್ ನಮಾಝಿನ ಬಳಿಕ ಖಮೀಶ್ ಮುಷಾಯತ್ ಮದೀನಾ ಅಸ್ಕರಿ ರಸ್ತೆ ಬಳಿಯ ಧಫನ ಭೂಮಿಯಲ್ಲಿ ಜನಾಝ ನಮಾಜ್ ನೆರವೇರಿಸಿ, ನಂತರ ನಡೆದ ದಫನ ಕಾರ್ಯದಲ್ಲಿ ಹನೀಫ್ ಮಂಜೇಶ್ವರ ಸೇರಿದಂತೆ ಉತ್ತರಪ್ರದೇಶ, ಕರ್ನಾಟಕ, ಕೇರಳ ಇಂಡಿಯನ್ ಸೋಷಿಯಲ್ ಫಾರಂ ಕಾರ್ಯಕರ್ತರು ಹಾಗು ಸಲ್ಮಾನ್ ಅಲಿ ಕುಟುಂಬಿಕರು ಭಾಗವಹಿಸಿದ್ದರು.

ಲಾಕ್ ಡೌನ್ ಮಧ್ಯೆಯೂ ಕಾನುನು ಹೋರಾಟ ಮತ್ತು ಮೃತರ ದಫನಕಾರ್ಯದಲ್ಲಿ ಬಿಡುವಿಲ್ಲದೆ ಕಾರ್ಯವೆಸಗಿದ ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ಕಮೀಸ್ ಮುಶಾಯ್ತ್ ಘಟಕದ ಅಧ್ಯಕ್ಷರೂ ಮತ್ತು ಭಾರತೀಯ ರಾಯಭಾರಿ ಕಚೇರಿ ಜೆದ್ದ ಇದರ ಸಿ ಡಬ್ಲ್ಯೂ ಸಿ ಸದಸ್ಯರೂ ಆಗಿರುವ ಹನೀಫ್ ಮಂಜೇಶ್ವರವರ ಕಾರ್ಯವೈಖರಿಗೆ ಸೌದಿ ಅರೇಬಿಯಾದ ಅನಿವಾಸಿ ಭಾರತೀಯರು ಮತ್ತು ಮೃತರ ಕುಟುಂಬಸ್ಥರಿಂದ ಪ್ರಶಂಸೆಗೆ ಪಾತ್ರವಾಯಿತು.

LEAVE A REPLY

Please enter your comment!
Please enter your name here