“ಸತ್ತ ಹಾಗೂ ಕದ್ದ ದನಗಳ ಮಾಂಸ ತಿನ್ನಿಸುವ ಕಿಡಿಗೇಡಿಗಳನ್ನು ಮುಸ್ಲಿಮರೇ ಹಿಡಿದು ಪೊಲೀಸರಿಗೊಪ್ಪಿಸಿ”

0
3063

ನ್ಯೂಸ್ ಕನ್ನಡ ವರದಿ: (07.06.19) ಸಣ್ಣ ವಾಹನವೊಂದರಲ್ಲಿ ಐದಾರು ಜಾನುವಾರುಗಳನ್ನು ಕೈ ಕಾಲು ಕಟ್ಟಿ ಕೊಂಡೊಯ್ಯುವ ವೇಳೆ ತಥಾಕತಿಕ ಗೋರಕ್ಷರು ಅದನ್ನು ತಡೆಹಿಡಿದು ನೋಡಿದಾಗ ಅದರಲ್ಲಿರುವ ಎಲ್ಲಾ ದನಗಳೂ ಉಸಿರು ಗಟ್ಟಿ ಸತ್ತು ಹೋಗಿದ್ದ ಹೃದಯ ವಿದ್ರಾವಕ ಘಟನೆಯ ದೃಶ್ಯ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ನಿಜವಾಗಿಯೂ ಇದು ಅಕ್ಷಮ್ಯ ಅಪರಾಧವಾಗಿದ್ದು ಇಂತಹ ಪ್ರಕರಣಗಳು ಮುಸ್ಲಿಮರ ಗಮನಕ್ಕೆ ಬಂದರೆ ಕೂಡಲೇ ಅಂಥವರನ್ನು ಯಾವುದೇ ಮುಲಾಜಿಲ್ಲದೇ ಯಾವ ಧರ್ಮದವರಾದರೂ ಅವರ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡಿ ಅವರನ್ನು ಬಂಧಿಸುವ ಕೆಲಸ ಮಾಡ ಬೇಕಾಗಿದೆ ಎಂದು ಮುಲ್ಕಿ ಕೇಂದ್ರ ಶಾಫಿ ಜುಮಾ ಮಸೀದಿಯ ಖತೀಬರು ಜುಮಾ ಭಾಷಣದಲಿ ಹೇಳಿದ್ದಾರೆ.

ಸತ್ತ ಮತ್ತು ಕಳವುಗೈದ ಜಾನುವಾರುಗಳ ಮಾಂಸ ಮುಸ್ಲಿಮರಿಗೆ ನಿಷಿದ್ದವಾಗಿದ್ದು ಈ ಹರಾಮನ್ನು ಮುಸ್ಲಿಮರಿಂದ ಮಾಡಿಸುವ ಸಮಾಜವದ್ರೋಹಿಗಳಿಗೆ ಕಡಿವಾಣ ಹಾಕ ಬೇಕಾದದ್ದು ಸರಕಾರದ ಕರ್ತವ್ಯ ಈ ಜವಾಬ್ದಾರಿ ಯನ್ನು ಪೋಲೀಸರು ನಿರ್ವಹಿಸದ ಕಾರಣ ಗೋರಕ್ಷಣೆಗಾಗಿ ಎಂಬ ನೆಪದಲ್ಲಿ ಹುಟ್ಟಿಕೊಂಡ ತಥಾಕತಿಕ ಸಂಘಟನೆಗಳು ಕಾನೂನನ್ನು ಕೈಗೆತ್ತಿಕೊಳ್ಳುವ ಕೆಲಸ ಮಾಡುತ್ತಿದ್ದು ಸರಕಾರ ಇಂತದ್ದಕ್ಕೆ ಆಸ್ಪದ ನೀಡದಂತೆ ಎಚ್ವರವಹಿಸಬೇಕು ಎಂದು ಅವರು ಆಗ್ರಹಿಸಿದರು.

ಅದೇ ವೇಳೆ ಇಂತಹ ಘಟನೆಗಳು ಪದೇ ಪದೇ ಮರುಕಳಿಸಲು ಪ್ರಾಮಾಣಿಕ ಜಾನುವಾರು ವ್ಯಾಪಾರಿಗಳಿಗೆ ಪರವಾನಿಗೆ ನೀಡಿ ಅವರಿಗೆ ರಕ್ಷಣೆ ನೀಡುವುದರಲ್ಲಿ ಉಂಟಾಗುತ್ತಿರುವ ವೈಫಲ್ಯವೇ ಕಾರಣ ನಿರುಪಯುಕ್ತ ಜಾನುವಾರುಗಳನ್ನು ಮಾಂಸಕ್ಕಾಗಿ ಮಾನವೀಯ ನೆಲೆಯಲ್ಲಿ ವಿಲೇವಾರಿ ಮಾಡಲು ಸರಕಾರ ಮತ್ತು ಸಂಘಟನೆಗಳು ಅನುವು ಮಾಡಿ ಕೊಟ್ಟರೆ ಈ ರೀತಿ ಕದ್ದು ಮುಚ್ಚಿ ಅಮಾನವೀಯವಾಗಿ ಜಾನುವಾರು ಸಾಗಿಸುವ ಪ್ರಮೇಯವೇ ಉದ್ಭವಿಸುವುದಿಲ್ಲ. ಎಂದು ಸ್ಪಷ್ಟ ಪಡಿಸಿದ ಅವರು

ಕೃಷಿ ಪ್ರದಾನ ರಾಷ್ಟ್ರ ಭಾರತದಲ್ಲಿ ಜಾನುವಾರು ಮಾಂಸ ವನ್ನು ನಿಷೇಧಿಸುವುದು ಅಷ್ಟು ಸುಲಭದ ಮಾತಲ್ಲ ಎಂಬುದನ್ನು ಗೋವಿನ ಹೆಸರಲ್ಲಿ ಅಧಿಕಾರಕ್ಕೆ ಬಂದವರೇ ಈಗ ಅರ್ಥ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ ಮಾಡುವ ಉದ್ದೇಶ ಇಲ್ಲ ಎಂಬ ಗೃಹ ಸಚಿವರ ಹೇಳಿಕೆ ಈಗ ಹೊರ ಬಿದ್ದಿರುವುದು ಸ್ವಾಗತಾರ್ಹವಾಗಿದೆ
ಎಂದ ಖತೀಬರು

ಹಿಂದು ಬಾಂಧವರು ಪೂಜೆ ಮಾಡಲು ಸಿದ್ದ ಪಡಿಸಿದ ಮತ್ತು ದೇವಸ್ಥಾನಕ್ಕೆ ಹರಕೆ ನೀಡಿದ ಗೋವುಗಳಿಗೆ ಸಂರಕ್ಷಣೆ ನೀಡ ಬೇಕಾದ ಕರ್ತವ್ಯ ಮುಸ್ಲಿಮರಿಗಿದ್ದು ಉಳಿದಂತೆ ಮಾನವರ ಆಹಾರ ಪದ್ಧತಿಗೆ ಅಡ್ಡಿ ಪಡಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ಸ್ಪಷ್ಟ ಪಡಿಸಿದರು. ಹಿಂದು ಮುಸ್ಲಿಂ ಧಾರ್ಮಿಕ ಮುಖಂಡರು ಒಟ್ಟು ಸೇರಿ ಚರ್ಚೆ ನಡೆಸಿ ಇದರ ಬಗ್ಗೆ ಒಂದು ತೀರ್ಮಾನಕ್ಕೆ ಬರುವುದು ಮತ್ತು ಅದನ್ನು ಎಲ್ಲರೂ ಪಾಲಿಸುವುದು ದೇಶದ ಶಾಂತಿ ಸೌಹಾರ್ದತೆಯ ನಿಟ್ಟಿನಲ್ಲಿ ಬಹಳ ಅಗತ್ಯವಾಗಿದೆ ಎಂದು ಹೇಳಿದ ಖತೀಬರು

ಅಭಿವೃದ್ಧಿ ಯನ್ನು ಕಡೆಗಣಿಸಿ ಕೇವಲ ಪ್ರಾಣಿ ಪಕ್ಷಿಗಳ ಹೆಸರಲ್ಲಿ ರಾಜಕೀಯ ಮಾಡುವ ಕಾಲ ಇದಲ್ಲ ಎಂದು ನುಡಿದರು. ನಮ್ಮ ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡಿರುತ್ತಿದ್ದರೆ ಈ ರೀತಿ ಸತ್ತ ದನದ ಮಾಂಸವನ್ನು ತಿನ್ನುವ ಗತಿಗೇಡು ನಮಗೆ ಉಂಟಾಗುತ್ತಿರಲಿಲ್ಲ ಎಂದ ಖತೀಬರು ನಮ್ಮ ಮಹಿಳೆಯರಿಗೆ ಶರೀಹತ್ ವಿದ್ಯೆ ನೀಡಲು ಮೊಹಲ್ಲಾಗಳು ಪೈಪೋಟಿಯಲ್ಲಿ ಮುಂದೆ ಬರುತ್ತಿರುವಂತೆ ಊರಿನ ಹಾದಿ ಬೀದಿಗಳಲ್ಲಿ ಅನಗತ್ಯ ಸುತ್ತಾಡುತ್ತಿರುವ ಹದಿಹರೆಯದವರನ್ನು ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಒಟ್ಟು ಸೇರಿಸಿ ಈಗ ರಮಳಾನ್ ಮುಗಿದ ಬಳಿಕ ಮದ್ರಸ ಮಸೀದಿಗಳಲ್ಲಿ ವಾರಕ್ಕೆ ಕನಿಷ್ಟ ಮೂರು ದಿವಸವಾದರೂ ಧಾರ್ಮಿಕ ವಿದ್ಯೆ ಕಲಿಸಿದರೆ ಅಂತವರಿಂದ ಇಂತಹ ಸತ್ತ ದನ ತಿನ್ನಿಸುವ ಪವೃತ್ತಿ ಯಾವತ್ತೂ ಉಂಟಾಗಲಾರದು ಎಂದು ಹೇಳಿದ ಅವರು ನಾವು ಕಷ್ಟಕಾರ್ಪಣ್ಯಗಳು ಸಹಿಸಿ ದುಡಿಯುತ್ತಿರುವುದು ನಮ್ಮ ಪತ್ನಿ ಮಕ್ಕಳ ಶ್ರೇಯಾಭಿವೃದ್ದಿಗಾಗಿ. ಅಂತದರಲ್ಲಿ ಅವರೇ ನಮಗೆ ತಿರುಗುಬಾಣವಾಗಿ ಪರಿಣಮಿಸಿದರೆ ಇಹಪರ ನಷ್ಟ ಹೊಂದಿದಂತೆಯೇ ಸರಿ ಎಂದು ಎಚ್ಚರಿಸಿದರು.

🖋Reporter

LEAVE A REPLY

Please enter your comment!
Please enter your name here