ಸರಿಯಾಗಿ ಸೆಲ್ಯೂಟ್ ಮಾಡಲೂ ಗೊತ್ತಿಲ್ಲದ ಕೇಂದ್ರ ರಕ್ಷಣಾ ಮಂತ್ರಿ: ವ್ಯಾಪಕ ಟೀಕೆ

0
1204

ನ್ಯೂಸ್ ಕನ್ನಡ ವರದಿ: (06.06.19) ಭಾರತೀಯ ಸೇನೆಯಲ್ಲಿ ಸೆಲ್ಯೂಟ್ ಒಂದು ಗೌರವಯುತ ಪ್ರಕ್ರಿಯೆ. ಸೆಲ್ಯೂಟ್ ಗೆ ಅದರದ್ದೇ ಆದ ರೀತಿ ನೀತಿಗಳು ಇವೆ. ಸೆಲ್ಯೂಟ್ ಮಾಡುವುದೆಂದರೆ ಬಹಳ ತ್ರಾಸದಾಯಕ ವಿಷಯವೇನಲ್ಲ. ಕೆಲವು ಬಾರಿ ಪ್ರಾಕ್ಟೀಸ್ ಮಾಡಿದರೆ ತನ್ನಿಂತಾನೇ ಸೆಲ್ಯೂಟ್ ನ ನೈಜ ರೂಪವನ್ನು ಕಲಿತುಕೊಳ್ಳಬಹುದು. ಆದರೆ ಒಂದು ದೇಶದ ರಕ್ಷಣಾ ಸಚಿವನಾಗಿ ಸರಿಯಾಗಿ ಸೆಲ್ಯೂಟ್ ಮಾಡದ ರಾಜ್ ನಾಥ್ ಸಿಂಗ್ ಇದೀಗ ವ್ಯಾಪಕ ಟೀಕೆಗೊಳಗಾಗಿದ್ದಾರೆ. ಒಬ್ಬ ನೇತಾರನಾಗಿ ಸೆಲ್ಯೂಟ್ ಮಾಡಲು ಕಲಿಯುವಷ್ಟು ಸಮಯ ಮತ್ತು ವ್ಯವಧಾನವಿಲ್ಲದೇ ಹೊಯಿತೇ ಎಂದು ಹಲವರು ಪ್ರಶ್ನಿಸಿದ್ದಾರೆ.

ಜೂನ್ ಒಂದರಂದು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ್ದ ರಾಜ್ ನಾಥ್ ಸಿಂಗ್ ಸೆಲ್ಯೂಟ್ ಮಾಡದೇ ಸುಮ್ಮನೇ ನಿಂತಿದ್ದರೂ ಸಾಕಾಗಿತ್ತು. ಆದರೆ ‘ಹಾಫ್ ನಾಝಿ’ ಸೆಲ್ಯೂಟ್ ಮಾಡುವ ಮೂಲಕ ಸೈನ್ಯಕ್ಕೆ ಅಪಮಾನ ಎಸಗಿದ್ದಾರೆ ಎಂದು ದಿ ಪ್ರಿಂಟ್ ಮಾಧ್ಯಮ ಉಲ್ಲೇಖಿಸಿದೆ. ಹಲವಾರು ಪ್ರಮುಖ ಮತ್ತು ಹಿರಿಯ ಅಧಿಕಾರಿಗಳು, ಸೈನ್ಯದ ಮುಖ್ಯಸ್ಥರು ಹಾಜರಿರುವ ಸಂದರ್ಭದಲ್ಲಿ ಇಂಥಾ ಸೆಲ್ಯೂಟ್ ಮುಜುಗರಕ್ಕೀಡಾಗಿಸುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

LEAVE A REPLY

Please enter your comment!
Please enter your name here