ಸಚಿನ್ ಕುರಿತಾದ ಆಸ್ಟ್ರೇಲಿಯಾದ ವ್ಯಂಗ್ಯ ಟ್ವೀಟ್ ಗೆ ಖಡಕ್ ಉತ್ತರ ನೀಡಿದ ಭಾರತೀಯ!

0
3517

ನ್ಯೂಸ್ ಕನ್ನಡ ವರದಿ-(24.04.18)ಕ್ರಿಕೆಟ್‌ ದೇವರೆಂದೆ ಖ್ಯಾತವಾಗಿರುವ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಇಂದು 4 ನೇ ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಕ್ರಿಕೆಟ್‌ ಆಸ್ಟ್ರೇಲಿಯಾ ಕೀಳು ಅಭಿರುಚಿಯ ಟ್ವೀಟ್‌ ಮಾಡಿ ಹಲವರ ಆಕ್ರೋಶಕ್ಕೆ ಗುರಿಯಾಗಿದೆ. ಸಚಿನ್‌ ಅವರೊಂದಿಗೆ ಆಸೀಸ್‌ ಮಾಜಿ ಆಟಗಾರ ಡೆಮಿಯನ್‌ ಪ್ಲೆಮಿಂಗ್‌ ಅವರೂ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಅವರು ಸಚಿನ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿರುವ ಹಳೆಯ ಪಂದ್ಯವೊಂದರ ವಿಡಿಯೋ ತುಣುಕೊಂದನ್ನು ಟ್ವೀಟ್‌ ಮಾಡಿ ಪ್ಲೆಮಿಂಗ್‌ಗೆ ಜನ್ಮದಿನದ ಶುಭಾಶಯ ಕೋರಿದೆ.

ಇದೀಗ ಈ ಟ್ವೀಟ್ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಟ್ರೇಲಿಯನ್ನರು ಹಲವು ಬಾರಿ ನಾಚಿಗೇಡು ಕೆಲಸ ಮಾಡಿ ಬ್ಯಾನ್ ಆದರೂ ತಮ್ಮ ಕುತಂತ್ರ ಬುದ್ಧಿಯನ್ನು ಬಿಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಇನ್ನೋರ್ವ ಟ್ವಿಟ್ಟರ್ ಬಳಕೆದಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಡೇಮಿಯನ್ ಫ್ಲೆಮಿಂಗ್ ಎಸೆತಕ್ಕೆ ಸಚಿನ್ ಭರ್ಜರಿ ಸಿಕ್ಸರ್ ಬಾರಿಸುವ ವೀಡಿಯೋ ಪ್ರಕಟಿಸಿ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಗೆ ತಪರಾಕಿ ನೀಡಿದ್ದಾರೆ. ವೀಡಿಯೋ ವೀಕ್ಷಿಸಿ

 

LEAVE A REPLY

Please enter your comment!
Please enter your name here