ನನ್ನ ದಾಖಲೆಗಳನ್ನು ಮುರಿದರೆ ವಿರಾಟ್ ಕೊಹ್ಲಿಗೆ ಈ ಗಿಫ್ಟ್ ನೀಡುತ್ತೇನೆಂದ ಸಚಿನ್!

0
10845

ನ್ಯೂಸ್ ಕನ್ನಡ ವರದಿ-(25.04.18): ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದೇವರು ಎಂದೇ ಪ್ರಸಿದ್ಧರಾದವರು. ತಮ್ಮ ಕ್ರಿಕೆಟ್ ಜೀವನದಲ್ಲಿ ಸಚಿನ್ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಕ್ರಿಕೆಟ್ ತಜ್ಞರ ಪ್ರಕಾರ ಸಚಿನ್ ತೆಂಡೂಲ್ಕರ್ ರ ದಾಖಲೆಗಳನ್ನು ಮುರಿಯುವುದು ಅಷ್ಟು ಸುಲಭವಿಲ್ಲ ಎಂಬುವುದಾಗಿದೆ. ಆದರೆ ಈಗಿನ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಧೂಳೀಪಟ ಮಾಡಿಕೊಂಡು ಸಾಗುತ್ತಿರುವುದು ಕಂಡರೆ ಸಚಿನ್ ದಾಖಲೆಯನ್ನು ಮುರಿಯಬಲ್ಲ ಏಕೈಕ ಆಟಗಾರ ಕೊಹ್ಲಿ ಎಂದು ತೋಚುತ್ತದೆ. ಸಚಿನ್ ಏಕದಿನ ಕ್ರಿಕೆಟ್ ನಲ್ಲಿ 49 ಶತಕಗಳನ್ನು ಬಾರಿಸಿ ಪ್ರಥಮ ಸ್ಥಾನದಲ್ಲಿದ್ದರೆ ವಿರಾಟ್ 35 ಶತಕಗಳನ್ನು ಬಾರಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ಸಚಿನ್ ತೆಂಡೂಲ್ಕರ್ ರವರ ಬಳಿ ಮಾಧ್ಯಮ ಪ್ರತಿನಿಧಿಯೋರ್ವ, “ನಿಮ್ಮ ಶತಕಗಳ ದಾಖಲೆಯನ್ನು ವಿರಾಟ್ ಕೊಹ್ಲಿಯು ಮುರಿದರೆ ನೀವೇನು ಮಾಡುತ್ತೀರಿ?” ಎಂದು ಕೇಳಿದಾಗ ಸಚಿನ್ “ನನ್ನ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿಯುತ್ತಾರೆಂದರೆ ಸಂತೋಷದ ವಿಷಯವೇ.. ನಾನು 50 ಬಾಟಲ್ ಶಾಂಪೇನು ಕೊಂಡು ಹೋಗಿ ವಿರಾಟ್ ಗೆ ನೀಡುತ್ತೇನೆ ಅವರ ಜೊತೆಗೆ ನಾನೂ ಒಂದನ್ನು ಹಂಚಿಕೊಂಡು ಕುಡಿದು ಸಂಭ್ರಮಾಚರಣೆ ನಡೆಸುತ್ತೇನೆ ಎಂದು ಸಚಿನ್ ಹೇಳಿದ್ದಾರೆ. ಇತ್ತೀಚೆಗಷ್ಟೇ ಬೀದಿ ಬದಿಯಲ್ಲಿ ಹೋಟೆಲ್ ಕಾರ್ಮಿಕರೊಂದಿಗೆ ಕ್ರಿಕೆಟ್ ಆಡಿ ಸಚಿನ್ ಹೃದಯ ವೈಶಾಲ್ಯತೆ ಮೆರೆದಿದ್ದರು.

LEAVE A REPLY

Please enter your comment!
Please enter your name here