ಬುಮ್ರಾ ಐಪಿಎಲ್ ನ ಶ್ರೇಷ್ಠ ಬೌಲರ್ ಎಂದ ಹಾಡಿ ಹೊಗಳಿದ ಸಚಿನ್ ತೆಂಡೂಲ್ಕರ್!

0
172

ನ್ಯೂಸ್ ಕನ್ನಡ ವರದಿ(13.5.19): ನಿನ್ನೆ ತಾನೇ ಹೈದರಾಬಾದ್ ನಲ್ಲಿ ಮುಂಬೈ ಇಂಡಿಯನ್ಸ್ ಹಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆದ ಐಪಿಎಲ್ ಫೈನಲ್ ಪಂದ್ಯಾಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ರೋಮಾಂಚನಕಾರಿಯಾಗಿ ಸೋಲಿಸಿದ್ದ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಪಂದ್ಯಾಟದಲ್ಲಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಉತ್ತಮ ಪ್ರದರ್ಶನ ತೋರಿದ್ದರು. ಟೂರ್ನಿಯಲ್ಲಿಯೇ ಉತ್ತಮ ಪ್ರದರ್ಶನ ತೋರಿದ ಬುಮ್ರಾರನ್ನು ಸಚಿನ್ ತೆಂಡೂಲ್ಕರ್ ಪ್ರಶಸಂಸಿಸಿದ್ದಾರೆ.

ವೇಗಿ ಜಸ್ಪ್ರೀತ್​​ ಬುಮ್ರಾ ಫೈನಲ್​ನಲ್ಲಿ ಸುತ್ತಿನಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಪಂದ್ಯ ಗೆಲುವಿನ ಪ್ರಮುಖ ರೂವಾರಿಗಳಾಗಿದ್ದಾರೆ. ಅಲ್ಲದೇ ಲೀಗ್​ನ ಎಲ್ಲ ಹಂತದಲ್ಲಿಯೂ ತಮ್ಮ ಕೈಚಳಕ ತೋರಿಸುವ ಮೂಲಕ ಎದುರಾಳಿ ಬ್ಯಾಟ್ಸ್​​ಮನ್​ಗಳನ್ನು ಪೆವಿಲಿಯನ್​ಗೆ ಕಳುಹಿಸಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ ಶ್ರೇಷ್ಠ ಬೌಲರ್​ ಎಂದು ಸಚಿನ್​​​ ಹೊಗಳಿದ್ದಾರೆ. ನನ್ನ ಕ್ರಿಕೆಟ್​​ ಜೀವನದಲ್ಲಿ ನೋಡಿದ ಶ್ರೇಷ್ಠ ಬೌಲರ್​ಗಳಲ್ಲಿ ಬುಮ್ರಾ ಒಬ್ಬರಾಗಿದ್ದಾರೆ. ಐಪಿಎಲ್​​ನಲ್ಲಿ ಅವರ ಉತ್ತಮ ಪ್ರದರ್ಶನ ಇಂಗ್ಲೆಂಡ್​ನಲ್ಲಿ ನಡೆಯುವ ವಿಶ್ವಕಪ್​ನಲ್ಲಿ ಟೀಂ ಇಂಡಿಯಾಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here