ಡಾಲರ್ ವಿರುದ್ಧ 74.46ರೂ. ಸಾರ್ವಕಾಲಿಕ ಕುಸಿತ ದಾಖಲಿಸಿದ ರೂಪಾಯಿ!

0
183

ನ್ಯೂಸ್ ಕನ್ನಡ ವರದಿ : ಭಾರತೀಯ ರೂಪಾಯಿ ಮೌಲ್ಯವು ದಿನದಿಂದ ದಿನಕ್ಕೆ ಕುಸಿಯುತ್ತಿರುವ ಪರಿಣಾಮ ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ ಆಗಿದಂತಾಗಿದೆ. ಡಾಲರ್​ ಎದುರು ರೂಪಾಯಿ ಮೌಲ್ಯ ಕುಸಿತ ಮುಂದುವರೆದಿದ್ದು, ಗುರುವಾರ ಬೆಳಗ್ಗೆ ರೂಪಾಯಿ ಮೌಲ್ಯ 25 ಪೈಸೆ ಕುಸಿಯುವ ಮೂಲಕ 74.46 ರೂ.ಗೆ ಮುಟ್ಟಿದೆ. ಸೆನ್ಸೆಕ್ಸ್​ 1000 ಅಂಕಿ ಕುಸಿದಿದೆ.

ಅಕ್ಟೋಬರ್ 11 ರಂದು ಸರ್ಕಾರಿ ಬಾಂಡ್​ಗಳನ್ನು ಖರೀದಿಸುವ ಮೂಲಕ ಆರ್​ಬಿಐ 120 ಬಿಲಿಯನ್ ಡಾಲರ್​ ಹಣವನ್ನು ಆರ್ಥಿಕತೆಗೆ ಸೇರಿಸಿಕೊಳ್ಳಲು ನಿರ್ಧರಿಸಿರುವುದು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎಂಬುದು ಟ್ರೇಡರ್​ಗಳ ಅಭಿಪ್ರಾಯವಾಗಿದೆ. ಇನ್ನು ಕಚ್ಚಾ ತೈಲ ಬೆಲೆ ಏರಿಕೆ ಮತ್ತು ವಿದೇಶಿ ಹೂಡಿಕೆ ಹೊರಹರಿವು ಹೆಚ್ಚಿದ ಪರಿಣಾಮ ರೂಪಾಯಿ ಮೌಲ್ಯ ನಿರಂತರ ಕುಸಿಯುತ್ತಿದೆ. ಅಲ್ಲದೇ, ಆರ್​ಬಿಐ ದ್ವೈಮಾಸಿಕ ಹಣಕಾಸು ಪರಾಮರ್ಶೆ ವೇಳೆ ಬಡ್ಡಿದರವನ್ನು ಯಥಾಸ್ಥಿತಿ ಕಾಯ್ದುಕೊಂಡಿದ್ದು, ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ.

34,063.82 ಬಿಎಸ್​ಇ ಸೆನ್ಸೆಕ್ಸ್​ ಮತ್ತು 10,169.80 ನಿಫ್ಟಿಯೊಂದಿಗೆ ಗುರುವಾರದ ವಹಿವಾಟು ಆರಂಭಿಸಿದ ಮಾರುಕಟ್ಟೆ ಬೆಳಗ್ಗೆ 9.35ಕ್ಕೆ ಸಾವಿರ ಅಂಕಿ ಸೆನ್ಸೆಕ್ಸ್​ ಕುಸಿತ ಕಂಡು 33,723.53 ಕ್ಕೆ, ನಿಫ್ಟಿ 10,138.60 ಕ್ಕೆ ಬಂದು ನಿಂತಿತು. ಎಚ್​ಡಿಎಫ್​ಸಿ, ರಿಲಾಯನ್ಸ್​ ಇಂಡಸ್ಟ್ರಿ, ಇನ್​ಫೋಸಿಸ್​, ಐಸಿಐಸಿಐ ಬ್ಯಾಂಕ್​ ಸೆನ್ಸೆಕ್ಸ್​ ಇಳಿಮುಖವಾಗಿದೆ. ಯುಎಸ್ ಟೆಕ್ ಸ್ಟಾಕ್​ಗಳ ಷೇರುಗಳಲ್ಲಿ ಭಾರೀ ತಿದ್ದುಪಡಿ, ಫೆಡ್ ದರ ಹೆಚ್ಚಳ ಮತ್ತು ಚೀನಾದೊಂದಿಗೆ ಅಮೆರಿಕದ ವ್ಯಾಪಾರ ಯುದ್ಧದ ಪರಿಣಾಮ ಏಷ್ಯಾದ ಹಲವು ಮಾರುಕಟ್ಟೆಗಳು ಕುಸಿತದ ಹಾದಿಯಲ್ಲಿವೆ.

LEAVE A REPLY

Please enter your comment!
Please enter your name here