Tik Tok ಫನ್ನೀ ವಿಡಿಯೋ ಮೂಲಕ ನರೇಂದ್ರ ಮೋದಿಯನ್ನು ಟೀಕಿಸಿದ ರಮ್ಯಾ!

0
1738

ನ್ಯೂಸ್ ಕನ್ನಡ ವರದಿ(14-2-2019)ನವದೆಹಲಿ: ಮಾಜಿ ಸಂಸದೆ , ನಟಿ , ಕಾಂಗ್ರೆಸ್ ಮುಖಂಡೆ ರಮ್ಯಾರವರು ನರೇಂದ್ರ ಮೋದಿ ಸರ್ಕಾರವನ್ನು ಲೇವಡಿಮಾಡಿ ಟ್ವೀಟ್ ಮಾಡಿದ್ದಾರೆ.ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು  ‘ಭಾರತೀಯ ಜೂಟಿ ಪಾರ್ಟಿ’ (ಭಾರತೀಯ ಸುಳ್ಳಿನ ಪಕ್ಷ) ಎಂದು ಕಾಳೆಲೆದಿದ್ದಾರೆ. ಫೆಬ್ರವರಿ 13ರಂದು ತಮ್ಮ ಅಧಿಕೃತ ಟ್ವಿಟರ್ ಅಕೌಂಟ್ ನಲ್ಲಿ  ಚೀನೀ ಟಿಕ್ ಟಾಕ್ ತಮಾಷೆ ವಿಡಿಯೋ ಒಂದನ್ನು ಪೋಸ್ಟ್ ಮಾಡಿ, ‘ಭಾರತೀಯ ಸುಳ್ಳಿನ ಪಕ್ಷ’ದ ಭರವಸೆಗಳು ಇದೇ ರೀತಿಯದ್ದಾಗಿವೆ ಎಂದು ಕೇಂದ್ರ ಸರಕಾರವನ್ನು  ತರಾಟೆಗೆ ತೆಗೆದುಕೊಂಡಿದ್ದಾರೆ.

ತಮಾಷೆ ವಿಡಿಯೋದಲ್ಲಿ ತರುಣಿಯೊಬ್ಬಳು ಪ್ಲಾಸ್ಟಿಕ್ ಸ್ಟೂಲ್ ಒಂದನ್ನು ತನ್ನ ತಲೆ ಮೇಲಿರಿಸಿಕೊಂಡಿರುತ್ತಾಳೆ. ಕೆಮರಾ ಕ್ಲೋಸಪ್ ನಲ್ಲಿ ನೋಡಿದಾಗ ಆಕೆ ವಿಮಾನದ ಕಿಟಕಿಯಿಂದ ಹೊರಭಾಗವನ್ನು ನೋಡುತ್ತಿರುವಂತೆ ಭಾಸವಾಗುತ್ತದೆ.  ನಿಧಾನವಾಗಿ ಕೆಮರಾ ಲಾಂಗ್ ಶಾಟ್ ಗೆ ಹೋಗುತ್ತಿದ್ದಂತೆ ಆಕೆ ಹಿಡಿದಿರುವುದು ಪ್ಲಾಸ್ಟಿಕ್ ಸ್ಟೂಲು ಎಂಬುದು ನೋಡುಗರಿಗೆ ತಿಳಿಯುತ್ತದೆ. ಈ ಸನ್ನಿವೇಶವನ್ನು ರಮ್ಯಾ ಅವರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದ ಜನರಿಗೆ ನೀಡಿರುವ ಭರವಸೆಗಳಿಗೆ ಹೋಲಿಕೆ ಮಾಡಿ ಆ ಮೂಲಕ  ಕೇಂದ್ರ ಸರಕಾರವು ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಅರ್ಥದಲ್ಲಿ ‘ಭಾರತೀಯ ಜೂಟಿ ಪಾರ್ಟೀಸ್ ಪ್ರಾಮಿಸಸ್ ಪ್ರಾಮಿಸಸ್ ಬಿ ಲೈಕ್’ ಎಂದು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಈ ಟ್ವೀಟ್ ಅನ್ನು ರಮ್ಯಾ ಅವರು ಪ್ರಧಾನಮಂತ್ರಿಯವರ ಅಧಿಕೃತ ಟ್ವಿಟರ್ ಖಾತೆಗೆ ಮತ್ತು BJP4Inda ಅಕೌಂಟ್ ಗೆ ಟ್ಯಾಗ್ ಮಾಡಿದ್ದಾರೆ.

Bharatiya Jhooti party’s promises be like- @BJP4India @narendramodi pic.twitter.com/JgFtzroUTz

— Divya Spandana/Ramya (@divyaspandana) February 13, 2019

 

LEAVE A REPLY

Please enter your comment!
Please enter your name here