ನಾಳೆಯಿಂದ ಯಾವ್ಯಾವ ರೈಲು ಸಂಚಾರ ಆರಂಭವಾಗಿದೆ?: ಇಲ್ಲಿದೆ ಕಂಪ್ಲೀಟ್ ಸುದ್ದಿ

0
178

ನ್ಯೂಸ್ ಕನ್ನಡ ವರದಿ: ದೇಶದಲ್ಲಿ ಹೇರಿರುವ ಲಾಕ್​ಡೌನ್ ನಿಧಾನವಾಗಿ ಸಡಿಲವಾಗುತ್ತಿರುವ ಹಿನ್ನೆಲೆ ಮೇ 12ರಿಂದ ಆಯ್ದ ನಗರಗಳಿಗೆ ಪ್ರಯಾಣಿಕ ರೈಲು ಸೇವೆ ಆರಂಭಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರೋ ಭಾರತೀಯ ರೈಲ್ವೆ, ಮೇ 12ರಿಂದ 15 ಜೋಡಿ ರೈಲುಗಳು ದೆಹಲಿಯಿಂದ, ದಿಬ್ರುಗಢ, ಅಗರ್ತಲಾ, ಹೌರಾ, ಪಾಟ್ನಾ, ಬಿಲಾಸ್​ಪುರ, ರಾಂಚಿ, ಭುವನೇಶ್ವರ, ಸಿಖಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡಗಾಂವ್, ಮುಂಬೈ, ಅಹಮದಾಬಾದ್ ಹಾಗೂ ಜಮ್ಮುತಾವಿ ನಡುವೆ ಸಂಚರಿಸಲಿವೆ ಎಂದಿದೆ.

ಐಆರ್​ಸಿಟಿಸಿ ವೆಬ್​ಸೈಟ್ ಹಾಗೂ ಮೊಬೈಲ್​ ಆಯಪ್​ನಲ್ಲಿ ಮಾತ್ರ ಟಿಕೆಟ್​ಗಳನ್ನ ಬುಕ್ ಮಾಡಬಹುದು. ರೈಲ್ವೆ ನಿಲ್ದಾಣದಲ್ಲಿ ಯಾವುದೇ ಟಿಕೆಟ್ ನೀಡಲಾಗುವುದಿಲ್ಲ. ಯಾವುದೇ ಏಜೆನ್ಸಿಗೂ ಟಿಕೆಟ್ ಹಂಚಿಕೆ ಮಾಡಲು ಅವಕಾಶವಿಲ್ಲ.

ಮೇ 11ರ ಸಂಜೆ 4 ಗಂಟೆಯಿಂದ ಟಿಕೆಟ್​ಗಳನ್ನು https://www.irctc.co.in/ ನಲ್ಲಿ ಕಾಯ್ದಿರಿಸಬಹುದಾಗಿದೆ.

ಪ್ರಯಾಣಿಕರು ಪಾಲಿಸಬೇಕಾದ ನಿಯಮಗಳು:

೧. ಇ-ಟಿಕೆಟ್​ ಇರುವ ಪ್ರಯಾಣಿಕರಿಗೆ ಮಾತ್ರ ರೈಲು ನಿಲ್ದಾಣಕ್ಕೆ ಬರಲು ಅವಕಾಶ.

೨. ರೈಲು ನಿಲ್ದಾಣದಿಂದ ಮತ್ತು ರೈಲು ನಿಲ್ದಾಣಕ್ಕೆ ಪ್ರಯಾಣಿಕರ ಓಡಾಟ ಹಾಗೂ ಅವರನ್ನು ಕರೆದುಕೊಂಡು ಹೋಗುವ ವಾಹನದ ಚಾಲಕನ ಓಡಾಟಕ್ಕೆ ಇ-ಟಿಕೆಟ್ ಅಗತ್ಯ.

೩. ಎಲ್ಲಾ ಪ್ರಯಾಣಿಕರನ್ನು ಕಡ್ಡಾಯವಾಗಿ ಸ್ಕ್ರೀನಿಂಗ್​ ನಡೆಸಲಾಗುತ್ತದೆ. ರೋಗ ಲಕ್ಷಣ ಕಾಣಿಸದವರಿಗೆ ಮಾತ್ರ ರೈಲು ಹತ್ತಲು ಅವಕಾಶ.

೪. ರೈಲ್ವೆ ಸ್ಟೇಷನ್​ನ ಆಗಮ, ನಿರ್ಗಮನ ಪ್ರದೇಶ ಮತ್ತು ರೈಲ್ವೆ ಕೋಚ್​ಗಳಲ್ಲಿ ಹ್ಯಾಂಡ್​ ಸ್ಯಾನಿಟೈಸರ್ ನೀಡಲಾಗುತ್ತದೆ.

೫. ನಿಲ್ದಾಣಕ್ಕೆ ಆಗಮಿಸುವಾಗ ಮತ್ತು ಪ್ರಯಾಣಿಸುವಾಗ ಮುಖವನ್ನು ಬಟ್ಟೆ ಅಥವಾ ಮಾಸ್ಕ್​ ಮೂಲಕ ಕವರ್ ಮಾಡಿಕೊಳ್ಳಬೇಕು.

೬. ರೈಲು ಹತ್ತುವಾಗ ಮತ್ತು ಪ್ರಯಾಣಿಸುವಾಗ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು.

೭. ತಮ್ಮ ಊರು ತಲುಪಿದ ಪ್ರಯಾಣಿಕರು ಆಯಾ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಸೂಚಿಸಿದ ನಿಯಮಗಳನ್ನ ಪಾಲಿಸಬೇಕು.

ರಾಜ್ಯದಲ್ಲಿನ ಪ್ರಸ್ತಾವಿತ ರೈಲು ಮಾರ್ಗಗಳು:

ಮೇ 12ರಿಂದ ಬೆಂಗಳೂರಿನಿಂದ ದೆಹಲಿಗೆ ಪ್ರತಿನಿತ್ಯ ಒಂದು ರೈಲು ಸಂಚರಿಸಲಿದೆ. ಬೆಂಗಳೂರಿನಿಂದ ರಾತ್ರಿ 8 ಗಂಟೆಗೆ ಹೊರಡುವ ರೈಲು ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ-ಧರ್ಮಾವರಂ ಜಂಕ್ಷನ್-ಅನಂತಪುರ-ಗುಂಟಕಲ್ ಜಂಕ್ಷನ್-ರಾಯಚೂರು-ಸೇಡಂ- ಸಿಖಂದರಾವಬಾದ್ ಜಂಕ್ಷನ್-ಕಾಝಿಪೇಟ್ ಜಂಕ್ಷನ್-ಬಾಲ್​ಹರ್ಷ-ನಾಗ್ಪುರ-ಇತರ್ಸಿ ಜಂಕ್ಷನ್-ಭೋಪಾಲ್ ಜಂಕ್ಷನ್-ಝಾನ್ಸಿ ಜಂಕ್ಷನ್-ಗ್ವಾಲಿಯರ್ ಜಂಕ್ಷನ್-ಆಗ್ರಾ ಕಂಟೋನ್ಮೆಂಟ್ ಮೂಲಕ ದೆಹಲಿ ತಲುಪಲಿದೆ.

ಅದೇ ರೀತಿ ಮೇ 14ರಿಂದ ಪ್ರತಿದಿನ ದೆಹಲಿಯಿಂದ ರಾತ್ರಿ 8.45ಕ್ಕೆ ಹೊರಡಲಿರುವ ರೈಲು ಆಗ್ರಾ ಕಂಟೋನ್ಮೆಂಟ್​-ಗ್ವಾಲಿಯರ್ ಜಂಕ್ಷನ್-ಝಾನ್ಸಿ ಜಂಕ್ಷನ್-ಭೋಪಾಲ್ ಜಂಕ್ಷನ್-ಇತರ್ಸಿ ಜಂಕ್ಷನ್-ನಾಗ್ಪುರ-ಬಾಲ್​ಹರ್ಷ-ಕಾಝಿಪೇಟ್ ಜಂಕ್ಷನ್-ಸಿಖಂದರಾವಬಾದ್ ಜಂಕ್ಷನ್-ಸೇಡಂ-ರಾಯಚೂರು-ಗುಂಟಕಲ್ ಜಂಕ್ಷನ್-ಅನಂತಪುರ-ಧರ್ಮಾವರಂ ಜಂಕ್ಷನ್-ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ಮೂಲಕ ಬೆಂಗಳೂರು ತಲುಪಲಿದೆ.

ಮೇ 13ರಿಂದ ಪ್ರತಿ ಮಂಗಳವಾರ, ಬುಧವಾರ ಹಾಗೂ ಭಾನುವಾರ ಬೆಳಗ್ಗೆ 10.55ಕ್ಕೆ ದೆಹಲಿಯಿಂದ ತಿರುವನಂತಪುರಂಗೆ ರೈಲು ಸಂಚರಿಸಲಿದೆ. ದೆಹಲಿಯಿಂದ ಹೊರಡಲಿರುವ ರೈಲು ಕೋಟಾ-ವಡೋದರಾ-ವಸಾಯಿ ರೋಡ್-ಪನ್ವೆಲ್-ರತ್ನಗಿರಿ-ಸಾವಂತ್ವಾಡಿ ರೋಡ್-ಮಡಗಾಂವ್-ಕಾರವಾರ-ಉಡುಪಿ-ಮಂಗಳೂರು-ಕಾಸರಗೋಡು-ಕಣ್ಣೂರು-ಕೋಯಿಕ್ಕೋಡ್-ಶೋರನೂರ್ ಜಂಕ್ಷನ್-ತ್ರಿಸೂರ್-ಎರ್ನಾಕುಲಂ ಜಂಕ್ಷನ್-ಅಲೆಪ್ಪಿ-ಕೊಲ್ಲಂ ಮೂಲಕ ತಿರುವನಂತಪುರಂ ತಲುಪಲಿದೆ.

ಅದೇ ರೀತಿ ಮೇ 15ರಿಂದ ಪ್ರತಿ ಮಂಗಳವಾರ, ಗುರುವಾರ ಮತ್ತು ಶುಕ್ರವಾರ ಸಂಜೆ 7.15ಕ್ಕೆ ಕೇರಳದ ತಿರುವನಂತಪುರಂನಿಂದ ದೆಹಲಿಗೆ ರೈಲು ಹೊರಡಲಿದೆ.

ಪ್ರಯಾಣಿಕ ರೈಲುಗಳ ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡುತ್ತಿದ್ದಂತೆ ಐಆರ್​ಟಿಟಿಸಿ ವೆಬ್​ಸೈಟ್​ಗೆ ಲಾಗಿನ್​ ಆಗುವವರ ಸಂಖ್ಯೆ ಅಧಿಕಗೊಂಡ ಹಿನ್ನೆಲೆಯಲ್ಲಿ ವೆಬ್​ಸೈಟ್​ ಕೆಲ ಸ್ಥಗಿತಗೊಂಡಿದೆ.

ವೆಬ್​ಸೈಟ್​ ಸ್ಥಗಿತಗೊಂಡಿದಕ್ಕೆ ವಿಷಾದ ವ್ಯಕ್ತಪಡಿಸಿರುವ ರೈಲ್ವೇ ಮಂಡಳಿ ಶೀಘ್ರದಲ್ಲೇ ವೆಬ್​ಸೈಟ್​ ಸರಿಪಡಿಸುವುದಾಗಿ ಟ್ವಿಟ್​ ಮಾಡಿದೆ.

‘ವಿಶೇಷ ರೈಲುಗಳಿಗೆ ಸಂಬಂಧಿಸಿದ ಡೇಟಾವನ್ನು ಐಆರ್‌ಸಿಟಿಸಿ ವೆಬ್‌ಸೈಟ್​ಗೆ ಅಪ್​ಲೋಡ್​ ಮಾಡಲಾಗುತ್ತಿದೆ. ಕೆಲವೇ ಸಮಯದಲ್ಲಿ ರೈಲು ಟಿಕೆಟ್​ ಬುಕ್ಕಿಂಗ್​ ಲಭ್ಯವಾಗಲಿದೆ ಎಂದು ರೈಲ್ವೆ ಮಂಡಳಿ ತಿಳಿಸಿದೆ.

LEAVE A REPLY

Please enter your comment!
Please enter your name here